ಬ್ರಿಟನ್ :
ಬ್ರಿಟನ್ ದೇಶದ ಪ್ರಸಿದ್ದ ಪ್ರವಾಸ ಸಂಯೋಜಕ ಸಂಸ್ಥೆಯಾದ ಥಾಮಸ್ ಕುಕ್ ಕೆಲವೊಂದು ಒಪ್ಪಂದಗಳ ಗುರಿ ತಲುಪುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಇಡೀ ಸಂಸ್ಥೆ ಇಂದು ದಿವಾಳಿ ಆಗುವ ಹಂತ ತಲುಪಿದೆ ಎಂದು ಅದರ ಸಿಇಓ ತಿಳಿಸಿದ್ದಾರೆ.
ಲಂಡನ್ ಮೂಲದ ಸಂಸ್ಥೆ ಇದಾಗಿದ್ದು ಇದು ಸದ್ಯ ಆರ್ಥಿಕವಾಗಿ ಬಹಳ ಹೊಡೆತ ತಿಂದಿತ್ತು ಮತ್ತು ಇದರಲ್ಲಿ ಕೆಲಸ ಮಾಡುತ್ತಿರುವ ಸುಮಾರು 30000 ಜನ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದಾರೆ ಮತ್ತು ಥಾಮಸ್ ಕುಕ್ ನಿಂದ ಟಿಕೆಟ್ ಬುಕ್ ಮಾಡಿಕೊಂಡು ಹೋಗಿದ್ದ ಪ್ರಯಾಣಿಕರನ್ನು ಅವರ ಾಗಮನದ ದಿನಾಂಕಕ್ಕೆ ಅನುಗುಣವಾಗಿ ಸ್ವದೇಶಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಿಇಓ ತಿಳಿಸಿದ್ದಾರೆ .
ಇನ್ನು ಕಂಪನಿಯ ಆರ್ಥಿಕ ಹಿಂಜರಿತವನ್ನು ತಡೆಯಲು ಕಂಪನಿಯೂ ಬ್ರಿಟನ್ ಸರ್ಕಾರದ ಮುಂದೆ ಸುಮಾರು 150 ಬಿಲಿಯನ್ ಪೌಂಡುಗಳ ಆರ್ಥಿಕ ಸಹಾಯ ಕೋರಿದೆ ಎಂದು ಇಂಗ್ಲೆಂಡ್ ಪ್ರಧಾನಿ ತಿಳಿಸಿದ್ದಾರೆ. ಮತ್ತು ನಮ್ಮ ದೇಶದಲ್ಲಿ ಇಷ್ಟು ದೊಡ್ಡ ಮೊತ್ತದ ದಿವಾಳಿಯಾಗಿರುವುದು ಇದೇ ಮೊದಲು ಮತ್ತು ಅದನ್ನು ನಿಯಂತ್ರಿಸಲು ಅವಶ್ಯಕ ಇರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ನಾವು ತಯಾರಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಭಾರತದ ಥಾಮಸ್ ಕುಕ್ ಇಂಡಿಯಾ ಕಂಪನಿಯನ್ನು ಥಾಮಸ್ ಕುಕ್ ಯುಕೆ ಸಂಸ್ಥೆಯೂ ಕೆನಡಾ ಮೂಲದ ಫೇರ್ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಗೆ ಸಂಪೂರ್ಣವಾಗಿ ಮಾರಿತ್ತು ಮತ್ತು ಆದ್ದರಿಂದ ಬ್ರಿಟಿಷ್ ಸಂಸ್ಥೆಯ ಆರ್ಥಿಕ ಕುಸಿತ ಥಾಮಸ್ ಕುಕ್ ಇಂಡಿಯಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ