ಅಕ್ರಮ ಹಣ ವರ್ಗಾವಣೆ : ದೆಹಲಿಯಲ್ಲಿ 10 ಕಡೆಗಳಲ್ಲಿ ಇಡಿ ಶೋಧ….!

ನವದೆಹಲಿ:

    ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ನಿವಾಸ ಸೇರಿದಂತೆ ಸುಮಾರು 10 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ  ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಸೇರಿದಂತೆ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಮತ್ತಿತರರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. 

    ಇದಕ್ಕೂ ಮುನ್ನಾ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ನೀಡಲಾದ ಐದನೇ ಸಮನ್ಸ್ ಗೂ ಕೇಜ್ರಿವಾಲ್ ಗೈರಾಗಿದ್ದರು.

    ಫೆಬ್ರವರಿ 6 ರಂದು  ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಜಾರಿ ನಿರ್ದೇಶನಾಲಯ (ಇಡಿ) ಕಾನೂನು ಕ್ರಮ ಕೈಗೊಂಡಿತು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಐದು ಸಮನ್ಸ್‌ಗಳಿಗೆ ಹಾಜರಾಗಲು ವಿಫಲವಾದ ಕಾರಣ ಇಡಿ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಿದೆ.

    ನೀತಿ ನಿರೂಪಣೆ, ಅಂತಿಮಗೊಳ್ಳುವ ಮುನ್ನ ನಡೆದ ಸಭೆಗಳು ಮತ್ತು ಲಂಚದ ಆರೋಪದಂತಹ ವಿಷಯಗಳ ಕುರಿತು ಕೇಜ್ರಿವಾಲ್ ಅವರ ಹೇಳಿಕೆಯನ್ನು ದಾಖಲಿಸಲು ಇಡಿ ಬಯಸಿದೆ ಎಂದು ಎಎನ್‌ಐ ವರದಿ ಮಾಡಿದೆ. ದೆಹಲಿ ಅಬಕಾರಿ ನೀತಿಯ (2021-22) ರಚನೆ ಮತ್ತು ಅನುಷ್ಠಾನದಲ್ಲಿ ಬಹು ಅಕ್ರಮಗಳನ್ನು ಆರೋಪಿಸುವ ಸಿಬಿಐನ ಎಫ್ ಐಆರ್ ನ್ನು ಈ ಪ್ರಕರಣ ಆಧರಿಸಿದೆ. ಭ್ರಷ್ಟಾಚಾರದ ಆರೋಪದ ನಂತರ ಮಧ್ಯ ನೀತಿಯನ್ನು ಹಿಂಪಡೆಯಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap