ವಾಷಿಂಗ್ಟನ್:
ಮುಂಬರುವ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇ ಮೇಲ್ ಮತ್ತು ಬೂತ್ ಗೆ ಖುದ್ದಾಗಿ ಹೋಗಿ ಎರಡು ಬಾರಿ ಮತ ಚಲಾಯಿಸಬಹುದು ಎಂದು ಉತ್ತರ ಕ್ಯಾರೊಲಿನಾ ರಾಜ್ಯದಲ್ಲಿ ಹೇಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಉತ್ತರ ಕ್ಯಾರೊಲಿನಾದ ಲಿಲ್ಮಿಂಗ್ಟನ್ ನಲ್ಲಿ ಮೊನ್ನೆ ಬುಧವಾರ ಪ್ರವಾಸ ನಡೆಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ಅವರ ಬಳಿ ಸುದ್ದಿ ವಾಹಿನಿಯ ವರದಿಗಾರರೊಬ್ಬರು, ತಮಗೆ ಇ ಮೇಲ್ ಮೂಲಕ ಮತ ಹಾಕುವ ವ್ಯವಸ್ಥೆಯಲ್ಲಿ ವಿಶ್ವಾಸವಿದೆಯೇ ಎಂದು ಕೇಳಿದರು.
ನಾಗರಿಕರು ಇಮೇಲ್ ನಲ್ಲಿ ಮತ ಹಾಕಿ ನಂತರ ತಾವು ಹಾಕಿರುವ ಮತವನ್ನು ಪರೀಕ್ಷೆ ಮಾಡಲು ಬೂತ್ ಗೆ ಖುದ್ದಾಗಿ ಹೋಗಿ ನೋಡಬಹುದು. ಇಮೇಲ್ ನಲ್ಲಿ ಹಾಕಿರುವ ಮತ ಸ್ವೀಕೃತವಾದರೆ ಬೂತ್ ನಲ್ಲಿ ಮತ್ತೊಮ್ಮೆ ಹಾಕಲು ಸಾಧ್ಯವಾಗುವುದಿಲ್ಲ, ಹೀಗಾಗಿ ಮೇಲೆ ಮಾಡಿ ನಂತರ ಮತಗಟ್ಟೆಗೆ ಕೂಡ ಹೋಗಬಹುದು ಎಂದು ಟ್ರಂಪ್ ಹೇಳಿದ್ದರು.
ಆದರೆ ಇದು ತಮಗೆ ಚುನಾವಣೆಯಲ್ಲಿ ಮತ ಸಿಗಲು ಕಾನೂನನ್ನು ಉಲ್ಲಂಘಿಸಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನತೆಗೆ ಹೇಳಿಕೊಡುತ್ತಿದ್ದಾರೆ ಎಂದು ಉತ್ತರ ಕ್ಯಾರೊಲಿನಾ ಅಟೊರ್ನಿ ಜನರಲ್ ಡೆಮಾಕ್ರಟ್ ಪಕ್ಷದ ಜೋಶ್ ಸ್ಟೈನ್ ಹೇಳಿದ್ದಾರೆ.ಉತ್ತರ ಕ್ಯಾರೊಲಿನಾ ರಾಜ್ಯದ ಕಾನೂನು ಪ್ರಕಾರ ಎರಡೆರಡು ಬಾರಿ ಮತ ಹಾಕುವುದು ಕಾನೂನು ಪ್ರಕಾರ ತಪ್ಪಾಗುತ್ತದೆ. ಬ್ಯಾಲಟ್ ನಲ್ಲಿ ಒಬ್ಬ ವ್ಯಕ್ತಿ ಮತ ಚಲಾಯಿಸಿದರೆ ನಂತರ ಅದನ್ನು ಬದಲಿಸಲು ಆಗುವುದಿಲ್ಲ. ಇಮೇಲ್ ಮೂಲಕ ಹಾಕುವುದೇ ಅಥವಾ ಮತಗಟ್ಟೆಗೆ ಹೋಗಿ ಹಾಕುವುದೇ ಎಂದು ಜನರೇ ತೀರ್ಮಾನಿಸಬೇಕು ಎಂದು ಅವರು ಹೇಳುತ್ತಾರೆ.
ಇಮೇಲ್ ಮತ ಚಲಾಯಿಸುವಿಕೆಯಲ್ಲಿ ವಂಚನೆ ನಡೆಯುವ ಸಾಧ್ಯತೆಯಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಅಟೊರ್ನಿ ಜನರಲ್ ವಿಲ್ಲಿಯಮ್ ಬರ್ರ್ ಟೀಕಿಸಿದ್ದಾರೆ.ಈ ಬಾರಿ ಕೊರೋನಾ ವೈರಸ್ ನಿಂದಾಗಿ ಅಮೆರಿಕನ್ನರಲ್ಲಿ ಬಹುತೇಕರು ಮೇಲ್ ಮೂಲಕ ಮತ ಹಾಕುವ ಸಾಧ್ಯತೆಯಿದೆ.