ರಸ್ತೆಯಲ್ಲೆ ಬಾಯ್ತೆರೆದಿದ್ದಾನೆ ಯಮರಾಯ..!!!

ಬೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಕ್ರಮತೆಗೆದುಕೊಂಡಿಲ್ಲ ಏಕೆ..?

ಹೊಸದುರ್ಗ:

        ರಸ್ತೆ ಬದಿಗೆ ವಿದ್ಯುತ್ ಕಂಬವಿರುವುದುಸಾಮಾನ್ಯ. ಇಲ್ಲೊಂದುಕಡೆರಸ್ತೆಮಧ್ಯೇಯೇ ವಿದ್ಯುತ್‍ಕಂಬ ಬಿಟ್ಟು ಡಾಂಬರೀಕರಣ ಮಾಡಲಾಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂಕ್ರಮತೆಗೆದುಕೊಂಡಿಲ್ಲ ಏಕೆ ಎಂಬುದು ಸಾರ್ವಜನಿಕರಿಗೆಕಾಡುವ ಪ್ರಶ್ನೆಯಾಗಿ ಉಳಿದಿದೆ.

        ಪಟ್ಟಣದ ಹೊರವಲಯದ ಗೊರವಿನಕಲ್ಲು ರಸ್ತೆಯಲ್ಲಿರುವ ಕಂಬದ ದೇವರ ಬಡಾವಣೆ ಬಳಿ ಇರುವ ರಸ್ತೆಯಲ್ಲಿ ಪರಸ್ಪರ ಸಮನ್ವಯ ಕೊರತೆ ಹಾಗೂ ಯಾರೊಬ್ಬರ ನಿರ್ಲಕ್ಷದಿಂದ ಇಂಥದ್ದೊಂದು ಯಡವಟ್ಟಿನ ಕೆಲಸವಾಗಿದೆ. ಯಾವುದೇ ಸಮಯದಲ್ಲಿ ಅಪಾಯ ಎದುರಾಗುವ ಸಂಭವ ಇದೆ. ವಾಹನ ಸಂಚಾರಕರು ಮತ್ತು ರಸ್ತೆ ಬದಿಯಲ್ಲಿ ಹಾದು ಹೋಗುವ ಪಾದಚಾರಿಗಳು ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಸಂಚಾರಿಸುತ್ತಿದ್ದಾರೆ.

       ಕಳೆದ ಒಂದುವರೆ ತಿಂಗಳಿನ ಕೆಳಗೆ ಈ ಬಗ್ಗೆ ಖುದ್ದು ನಾವೇ ಪೋನ್‍ಮಾಡಿ ತಿಳಿಸಿದಾಗ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.ಆದರೆ ಅಲ್ಲಿಂದ ಇಲ್ಲಿಯವರೆಗೂ ಈ ಸಮಸ್ಯೆ ಕುರಿತು ಯಾರೊಬ್ಬ ಅಧಿಕಾರಿ ಕ್ರಮ ತೆಗೆದುಕೊಂಡಿಲ್ಲ. ವಿಷಯ ಗೊತ್ತಿದ್ದರೂ ಸಾರ್ವಜನಿಕರ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದೆಯಾ ಎಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಾಂತಾಗಿದೆ.

     ಜನ ವಸತಿ ಪ್ರದೇಶವಾಗಿರುವುದರಿಂದ ದಿನಕ್ಕೆ ನೂರಾರು ವಾಹನಗಳು ಓಡಾಡುತ್ತಿರುತ್ತವೆ. ರಸ್ತೆ ಬದಿಯಲ್ಲೆ ದುರ್ಗಾ ಐಟಿಐ ಕಾಲೇಜಿದೆ. ಮಕ್ಕಳು ರಸ್ತೆ ಬದಿಯಲ್ಲೆ ಆಟವಾಡುತ್ತಿರುತ್ತಾರೆ. ಗ್ರಾಹಚಾರ ಕೆಟ್ಟು ಯಾವೊಬ್ಬ ಜೋರಾಗಿ ಬಂದು ಕಂಬಕ್ಕೆ ಬಡಿಸಿಕೊಂಡು ಅಪಘಾತ ಸಂಭವಿಸಿದರೆ ಅವರ ಪ್ರಾಣಗಳನ್ನು ಬೆಸ್ಕಾಂ ಇಲಾಖೆಯವರು ಮತ್ತೆ ಮರಳಿ ತಂದುಕೊಡುತ್ತಾರಾ ಎಂದು ಪ್ರಶ್ನಿಸುತ್ತಾರೆ ಬಡಾವಣೆಯ ಜನರು.

      ಈ ಬಗ್ಗೆ ವಿದ್ಯುತ್ ಕಂಬ ಸ್ಥಳಾಂತರಿಸುವ ಜಾವಾಬ್ದಾರಿ ಬೆಸ್ಕಾಂ ಇಲಾಖೆಯದ್ದು , ಆದರೆ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದೆ.ಕೂಡಲೇ ಸಂಬಂಧ ಪಟ್ಟವರು ಈ ವರದಿ ನೋಡಿ ಯಾದರೂ ಆಗುವ ಅಪಘಾತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಾ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap