ಟೋಕಿಯೋ :
ಉತ್ತರ ಕೊರಿಯಾದ ನಿರಂಕುಶ ಸರ್ವಾಧಿಕಾರಿ ನಾಯಕ ಕಿಮ್ ಜೋಂಗ್ ಉನ್ ಒಬ್ಬ ಬುದ್ಧಿವಂತ ಆತನಿಗೆ ದೇಶದ ಅಭಿವೃದ್ಧಿಗಾಗಿ ಏನು ಮಾಡಬೇಕು ಎಂಬುದು ತಿಳಿದಿದೆ ಎಂದು ಡೊನಾಲ್ಡ್ ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.
‘ಕಿಮ್ ಒಬ್ಬ ಚಾಲಾಕಿ ಮನುಷ್ಯ; ಉತ್ತರ ಕೊರಿಯದ ಅಭಿವೃದ್ಧಿಗಾಗಿ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡಬೇಕು ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.ಉತ್ತರ ಕೊರಿಯದಲ್ಲಿ ಆರ್ಥಿಕಾಭಿವೃಧಿ ಸಾಧನೆಗೆ ಅತ್ಯದ್ಭುತ ಸಂಪನ್ಮೂಲಗಳಿವೆ ಎಂದು ಟ್ರಂಪ್ ಹೇಳಿದ್ದಾರೆ.