ನಾವು ಎಂತಹ ತ್ಯಾಗಕ್ಕೂ ಸಿದ್ದ : ಖ್ವಾಮರ್ ಜಾವೆದ್ ಬಾಜ್ವಾ

ಇಸ್ಲಾಮಾಬಾದ್:

     ನೆರೆಯ ಪಾಕಿಸ್ತಾನ ತನ್ನ ನೀಚ ಬುದ್ದಿ ಬಿಟ್ಟು ಬಾಳಲು ಸಾಧ್ಯವೇ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.ಮತ್ತೆ ತನ್ನ ಹಳೆಯ ಬೆದರಿಕೆಯ ತಂತ್ರವನ್ನು ಮುಂದುವರೆಸಿದೆ. 

     ಕಾಶ್ಮೀರದಲ್ಲಿ ಭಾರತ ದೌರ್ಜನ್ಯವೆಸಗುತ್ತಿದೆ,ಕಾಶ್ಮೀರಿಗಳ ಮೇಲೆ ಬಲವಂತವಾಗಿ ಹಿಂದುತ್ವ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖ್ವಾಮರ್ ಜಾವೆದ್ ಬಾಜ್ವಾ ಕಿಡಿಕಾರಿದ್ದಾರೆ.

      ಕಾಶ್ಮೀರ ಪಾಕಿಸ್ತಾನದ ಅಜೆಂಡಾವಾಗಿದೆ. ಪ್ರಸ್ತುತ ಭಾರತ ಸರ್ಕಾರ ಕಾಶ್ಮೀರ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರ ನಮಗೆ ಸವಾಲಾಗಿದೆ. ಕಾಶ್ಮೀರವನ್ನು ಒಬ್ಬಂಟಿಯಾಗಿ ಪಾಕಿಸ್ತಾನ ಎಂದಿಗೂ ಬಿಡುವುದಿಲ್ಲ. ಕಟ್ಟಕಡೆಯ ಯೋಧ, ಗುಂಡು ಹಾಗೂ ಉಸಿರು ಇರುವವರೆಗೂ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಕಾಶ್ಮೀರಕ್ಕಾಗಿ ಪಾಕಿಸ್ತಾನ ಸೇನೆ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ. ಯುದ್ಧದ ವಾತಾವರಣ ಈಗಾಗಲೆ ಸೃಷ್ಟಿಯಾಗಿದೆ. ಆದರೆ, ನಾವು ಶಾಂತಿಯನ್ನು ಬಯಸುತ್ತೇವೆ. ಇಂದು ಕಾಶ್ಮೀರ ಆತಂಕದಲ್ಲಿ ಸುಡುತ್ತಿದೆ. ನಿಮ್ಮೊಂದಿಗೆ ನಾವಿದ್ದೇವೆಂಬುದನ್ನು ನಾನು ಕಾಶ್ಮೀರ ಜನತೆಗೆ ಭರವಸೆ ನೀಡುತ್ತೇನೆ. ಕಾಶ್ಮೀರಕ್ಕಾಗಿ ಯಾವುದೇ ಬಲಿದಾನಕ್ಕೂ ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link