ಜಿನೀವಾ :
ಚೀನಾ ಯಾವತ್ತಿಗೂ ಬೇರೆ ದೇಶಗಳೊಂದಿಗೆ ಯುದ್ಧ ಸಾರಲು ಬಯಸುವುದಿಲ್ಲ ಮತ್ತು ತನ್ನ ಪ್ರಾಬಲ್ಯ ಸ್ಥಾಪಿಸಲು, ಭೂ ಪ್ರದೇಶವನ್ನು ವಿಸ್ತರಿಸಲು, ಪ್ರಭಾವ ಮೆರೆಯಲು ನೋಡುವುದಿಲ್ಲ ಎಂದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ಬೇರೆ ದೇಶಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ, ಸಂಧಾನಗಳ ಮೂಲಕವೇ ಬಗೆಹರಿಸಲು ಚೀನಾ ನೋಡುತ್ತದೆ ಎಂದು ಹೇಳಿದ್ದಾರೆ. ಪೂರ್ವ ಲಡಾಕ್ ನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಾರತ-ಚೀನಾ ಸೇನೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಉದ್ನಿಗ್ನ ಸ್ಥಿತಿ, ಕೇಳಿಬರುತ್ತಿರುವ ಅಭಿಪ್ರಾಯಗಳಿಗೆ ಅಲ್ಲಿನ ಅಧ್ಯಕ್ಷರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವಿಸ್ತರಣೆಯ ಯುಗ ಮುಗಿಯಿತು, ತಮ್ಮ ಭೂಪ್ರದೇಶವನ್ನು ವಿಸ್ತರಿಸಲು ನೋಡಿದವರು ಇತಿಹಾಸದಲ್ಲಿ ಅಳಿದುಹೋಗಿದ್ದಾರೆ ಇಲ್ಲವೇ ನಾಶ ಹೊಂದಿದ್ದಾರೆ ಎಂದು ಚೀನಾಕ್ಕೆ ನೇರವಾದ ಸಂದೇಶ ಕೊಟ್ಟಿದ್ದರು.ಇದಕ್ಕೆ ಪ್ರತಿಯಾಗಿ ಎಂಬಂತೆ ನಿನ್ನೆಯ ಭಾಷಣದಲ್ಲಿ ಕ್ಸಿ ಜಿನ್ ಪಿಂಗ್ ಉತ್ತರ ಕೊಟ್ಟಿದ್ದು, ನಾಲ್ಕು ಗೋಡೆಗಳ ಹಿಂದೆ ನಿಂತು ಏನು ಬೆಳವಣಿಗೆಗಳಾಗುತ್ತಿದೆ ಎಂದು ತಮ್ಮ ದೇಶ ನೋಡುವುದಿಲ್ಲ. ಬದಲಾಗಿ, ಪರಸ್ಪರ ಬಲಪಡಿಸುವ ಹೊಸ ಅಭಿವೃದ್ಧಿ ಮಾದರಿಯನ್ನು ಬೆಳೆಸುವ ಗುರಿಯನ್ನು ನಾವು ಹೊಂದಿದ್ದೇವೆ.ಇದರಿಂದ ಚೀನಾದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಜಾಗವನ್ನು ಸೃಷ್ಟಿಸುತ್ತದೆ ಮಾತ್ರವಲ್ಲದೆ ಜಾಗತಿಕ ಆರ್ಥಿಕ ಚೇತರಿಕೆ ಮತ್ತು ಬೆಳವಣಿಗೆಗೆ ಪ್ರಚೋದನೆಯನ್ನು ನೀಡುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ