ಇಸ್ಲಾಮಬಾದ್ :
ಪಾಕಿಸ್ತಾನ ತನ್ನ ಆರ್ಥಿಕ ದಿವಾಳಿ ತನವನ್ನು ಎಷ್ಟೇ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರು ಅದು ಮಾಡುವ ಕೆಲಸಗಳನ್ನು ಅಲ್ಲಿನ ಪತ್ರಿಕೆಗಳೆ ಜಗತ್ತಿಗೇ ಪ್ರಚಾರ ಮಾಡಿಬಿಡುತ್ತದೆ. ಕೆಲ ದಿನಗಳ ಹಿಂದಷ್ಠೆ ಅಧಿಕಾರ ವಹಿಸಿಕೊಂಡಿದ್ದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು,
ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿ, 23 ಲಕ್ಷ ರೂಪಾಯಿಯನ್ನು ಸಂಪಾದಿಸಿದೆ.ಬೃಹತ್ ಪ್ರಮಾಣದ ಸಾಲದಿಂದಾಗಿ ಇಮ್ರಾನ್ ಖಾನ್ ದೊಡ್ಡ ಮಟ್ಟದ ಆರ್ಥಿಕ ಕೊರತೆ ಅನುಭವಿಸುತ್ತಿದ್ದು,
ಕಳೆದ ವಾರ 61 ಸರ್ಕಾರದ ಲಕ್ಸುರಿ ಕಾರುಗಳನ್ನು ಹರಾಜು ಮಾಡಿತ್ತು. ಇದರಿಂದಾಗಿ 200 ಮಿಲಿಯನ್ ಹಣ ಗಳಿಸಿತ್ತು.ಬುಲೆಟ್ ಪ್ರೂಪ್ ವಾಹನಗಳು, ನಾಲ್ಕು ಹೆಲಿಕಾಪ್ಟರ್ ಸೇರಿದಂತೆ 102 ಸರ್ ಪ್ಲಸ್ ಕಾರುಗಳನ್ನು ಹರಾಜು ಹಾಕುವ ಚಿಂತನೆ ನಡೆಸಲಾಗಿದೆ.
ಇಸ್ಲಾಮಾಬಾದಿನಲ್ಲಿ ನಡೆದ ಹರಾಜಿನಲ್ಲಿ ಮೂರು ಎಮ್ಮೆಗಳು ಹಾಗೂ ಐದು ಮರಿಗಳನ್ನು 2, 302, 000 ರೂ. ಗೆ ಹರಾಜು ಹಾಕಲಾಗಿದೆ. ಇವುಗಳನ್ನು ನವಾಜ್ ಷರೀಪ್ ಅವರ ಬೆಂಬಲಿಗರೇ ಕೊಂಡು ಕೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
8 ಎಮ್ಮೆಗಳಲ್ಲಿ ಒಂದನ್ನು 385,000 ರೂ.ಗೆ ಕ್ವಾಲಬ್ ಆಲಿ ಎಂಬವರು ಹರಾಜು ಕೂಗಿದ್ದಾರೆ. ಶರೀಫ್ ಮೇಲಿನ ಅಭಿಮಾನದಿಂದಾಗಿ ಮೂರು ಪಟ್ಟು ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳಲಾಗಿದೆ . ನಾಲ್ಕು ಮರಿ ಎಮ್ಮೆಗಳಲ್ಲಿ ಎರಡನ್ನು ಪಾಖರ್ ವಾರ್ಯಾಚಿ 215, 000 ಹಾಗೂ 270,000ಕ್ಕೆ ಮತ್ತೊಬ್ಬರು ಮೂರನೇ ಮರಿಯನ್ನು 182,000 ಗೆ ಕೊಂಡುಕೊಂಡಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.68 ವರ್ಷದ ಶರೀಫ್ ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷ ಜೈಲುಶಿಕ್ಷೆಗೊಳಗಾಗಿದ್ದರು . ಉನ್ನತ ನ್ಯಾಯಾಲಯ ಶಿಕ್ಷೆಯನ್ನು ರದ್ದುಗೊಳಿಸಿದ ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ