ನವದೆಹಲಿ

ಭಾರತದ ಬ್ಯಾಂಕ್ ಗಳಿಗೆ ಸಾಲ ಕಟ್ಟದೇ ವಿದೇಶಕ್ಕೆ ಪರಾರಿಯಾಗಿರುವ ಶ್ರೀಮಂತರ ಪೈಕಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಆ್ಯಂಟಿಗುವಾ ಸರ್ಕಾರ ನಿರ್ಧಾರ ಮಾಡಿದೆ ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ದೊರೆತಿದೆ.
ಈ ವಿಷಯದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಮೆಹುಲ್ ಚೋಕ್ಸಿಗೆ ಈಗಾಗಲೇ ನಾಗರಿಕತ್ವ ಪ್ರಧಾನ ಮಾಡಲಾಗಿದೆ. ಆದರೆ ಆತನ ವಿರುದ್ಧ ಆರೋಪಗಳು ಸಾಬೀತಾದರೆ ಖಂಡಿತಾ ನಾಗರಿಕತ್ವವನ್ನು ರದ್ದುಗೊಳಿಸುತ್ತೇವೆ. ಅಲ್ಲದೆ ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ನಮ್ಮ ಅಭ್ಯಂತರವೇನು ಇಲ್ಲಾಎಂದು ತಿಳಿಸಿದ್ದಾರೆ,ನಮ್ಮ ದೇಶ ಎಂದಿಗೂ ಆರ್ಥಿಕ ಅಪರಾಧಿಗಳಿಗೆ ಸುರಕ್ಷಿತ ತಾಣವಲ್ಲ.ಆಗಲೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮೆಹುಲ್ ಚೋಕ್ಸಿ ವಿರುದ್ಧ ವಿವಿಧ ಆರೋಪಗಳಿರಬಹುದು. ಆದರೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಅವರಿಗೂ ಒಂದು ಅವಕಾಶ ನೀಡಬೇಕು. ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಆದರೆ ಒಂದಂತೂ ಹೇಳ ಬಲ್ಲೆ ಆತ ತನ್ನ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಆತನನ್ನು ಖಂಡಿತಾ ಭಾರತಕ್ಕೆ ರವಾನಿಸುತ್ತೇವೆ ಎಂದು ಬ್ರೌನೆ ಹೇಳಿದ್ದಾರೆ.
