ನ್ಯಾಷನಲ್ ಪ್ರಸ್ ಕೌನ್ಲಿಲ್ ಆಫ್ ಇಂಡಿಯ ಮತ್ತು ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ 30 ಮಹಿಳಾ ಸಾಧಕಿಯರಿಗೆ ನ್ಯಾಷನಲ್ ವಿಮೆನ್ಸ್ ಅರ್ಚಿವರ್ಸ್ ಅವಾರ್ಡ್ ಪ್ರಧಾನ ಕಾರ್ಯಕ್ರಮವನ್ನು ಚಿನ್ನಸ್ವಾಮಿ ಕ್ರೀಡಾಂಗಣ,ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿರವರು , ನಿವೃತ್ತ ಲೋಕಯುಕ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆರವರು, .ನ್ಯಾಷನಲ್ ಪ್ರಸ್ ಕೌನ್ಸಿಲ್ ಅಧ್ಯಕ್ಷರಾದ ಶ್ರಾವಣ ಲಕ್ಷ್ಮಣ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು. ನಿವೃತ್ತ ಲೋಕಯಕ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆರವರು ಮಾತನಾಡಿ ಇಂದಿನ ಪರಿಸ್ಥಿತಿಗೆ ವ್ಯಕ್ತಿಗಳು ಕಾರಣವಲ್ಲ ,ಸಮಾಜ ಬಯಸಿದ್ದನ್ನು ಹುಡಕಿಕೊಂಡು ಹೋಗುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಜೈಲಿಗೆ ಹೋಗಿ ಬಂದವರನ್ನ ಊರಿನಿಂದ ಬಹಿಕ್ಷಾರ ಹಾಕುತ್ತಿದ್ದರು ಅದರೆ ಇಂದು ಜೈಲಿನಿಂದ ಹೊರಬಂದವರಿಗೆ ರಾಜ ಮಾರ್ಯಾದೆ ಬರಮಾಡಿಕೊಳ್ಳುತ್ತಾರೆ ಇದನ್ನ ನೋಡಿದರೆ ಸಮಾಜ ಎತ್ತ ಸಾಗುತ್ತಿದೆ,ಸಮಾಜಕ್ಕೆಏನು ಸಂದೇಶ ನೀಡಲು ಹೋಗುತ್ತಿದ್ದಾರೆ . ಹಣವಿದ್ದವರಿಗೆ ಅಧಿಕಾರ,ಅಧಿಕಾರವಿದ್ದವರಿಗೆ ಹಣ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಗುರುತಿಸುವಲ್ಲಿ ವಿಫಲವಾಗುತ್ತಿದೆ ಸ್ವಯಂ ಸೇವಾ ಸಂಘಟನೆಗಳು ಸಾಧನೆ ಮಾಡಿದವರನ್ನ ಗುರುತಿಸಿ,ಪ್ರಶಸ್ತಿ ನೀಡುತ್ತದೆ . ಎಂದು ಹೇಳಿದರು.
ಅಧ್ಯಕ್ಷರಾದ ಶ್ರಾವಣ್ ಲಕ್ಷ್ಮಣ್ ರವರು ಮಾತನಾಡಿ ಮಹಿಳೆ ಅಬಲೆ ಅಲ್ಲ,ಸಬಲೆ. ತೊಟ್ಟಿಲು ತೂಗುವವಳು,ಜಗತ್ತನ್ನ ತೂಗುವಳು. ಪುರುಷರಷ್ಟೆ ಸರಿಸಮಾನವಾಗಿ ಮಹಿಳೆಯರು ಕಲೆ,ಸಾಹಿತ್ಯ,ವಿಜ್ಞಾನ,ತಂತ್ರಜ್ಞಾನ,ರಾಜಕೀಯ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾಳೆ.
ತಾಯಿ,ತಂಗಿ,ಅಕ್ಕ ಮತ್ತು ಪತ್ನಿಯಾಗಿ ಕುಟುಂಬದ ನಿರ್ವಹಣೆ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುವವಳು ಮಹಿಳೆ ಅದ್ದರಿಂದ ನಮ್ಮ ಸಂಸ್ಥೆಯಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ 30ಮಹಿಳಾ ಸಾಧಕಿಯರುಗಳು ಸನ್ಮಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ