ಚೀನಾ ವಸ್ತುಗಳ ಮೇಲೆ ನಿರ್ಬಂಧ ಹೇರಿದ ಅಮೇರಿಕ..!

ವಾಷಿಂಗ್ಟನ್:

  ಕಂಪ್ಯೂಟರ್-ಭಾಗಗಳು, ಹತ್ತಿ ಮತ್ತು ಕೂದಲಿನ ಉತ್ಪನ್ನಗಳು ಸೇರಿದಂತೆ ಚೀನಾದಿಂದ ಐದು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ನಿಷೇಧಿಸಿದೆ.ಮುಸ್ಲಿಂ ಬಹುಸಂಖ್ಯಾತ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಬಂಧಿತ  ಕಾರ್ಮಿಕ ಶಿಬಿರಗಳಲ್ಲಿ ಅವುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.

    ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಜಗತ್ತಿನಾದ್ಯಂತ ಸೋಂಕು ಹರಡುವಿಕೆಗೆ ಚೀನಾ ಕಾರಣ ಎಂದು ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ದೂಷಿಸುವುದರೊಂದಿಗೆ ಅಮೆರಿಕಾ- ಚೀನಾ ನಡುವಣ ಸಂಬಂಧ ಕ್ಷೀಣಿಸಿದೆ. ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ, ಹಾಂಗ್ ಕಾಂಗ್, ಟಿಬೆಟ್, ಸ್ವಾತಂತ್ರ್ಯ, ತಂತ್ರಜ್ಞಾನ ಕಳವು ಮತ್ತಿತರ ಆರೋಪಗಳಿಂದಲೂ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
   ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ  ನಾಲ್ಕು 4 ವೃತ್ತಿಪರ ಕೌಶಲ್ಯ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳಲ್ಲಿ ಬಂಧಿತ ಕಾರ್ಮಿಕರಿಂದ ಉತ್ಪಾದಿಸಲಾಗಿರುವ ಹತ್ತಿ, ಅಫೆರೆಲ್, ಕಂಪ್ಯೂಟರು ಭಾಗಗಳು ಮತ್ತು ಕೂದಲಿನ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಅಮೆರಿಕಾದ ಒಳಾಡಳಿತ ಭದ್ರತಾ ಇಲಾಖೆ ( ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ) ಹೇಳಿಕೆಯಲ್ಲಿ ತಿಳಿಸಿದೆ.ಚೀನಾ ಸರ್ಕಾರದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಕ್ಸಿನ್‌ಜಿಯಾಂಗ್ ಉಯಿಗೂರ್ ಸ್ವಾಯತ್ತ ಪ್ರದೇಶದಲ್ಲಿನ ರಾಜ್ಯ ಪ್ರಯೋಜಿತ ಕಾರ್ಮಿಕರಿಂದ ಈ ಸರಕುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಮೆರಿಕಾ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap