ಸಿಡ್ನಿ:
ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ .ಅವರು ತಮಗೆ ಆಗಿರುವ ಗಾಯದ ಫೋಟೋಗಳನ್ನು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಈ ಪೋಟೋಗಳು ಇದೀಗ ತುಂಬಾ ಸದ್ದು ಮಾಡುತ್ತಿವೆ .
ನಡೆದ ಅಪಘಾತದ ಬಳಿಕ ಹೇಡನ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆಯಲ್ಲದೇ ಪ್ರಾಥಮಿಕ ತನಿಖೆಯ ಬಳಿಕ ತಿಳಿದು ಬಂದ ವಿಷಯವೇನೆಂದರೆ ಅವರ ತಲೆಗೆ ಭಾರೀ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ನನ್ನನ್ನು ಶೀಘ್ರ ಆಸ್ಪತ್ರೆಗೆ ತಲುಪಿಸಿ ಸ್ಕ್ಯಾನಿಂಗ್’ಗೆ ಸಹಕರಿಸಿaದ “ಬೆನ್ ಸ್ಯೂ ಕೆಲ್ಲಿ”ಗೆ ಹೇಡನ್ ಅವರು ಧನ್ಯವಾದ ಹೇಳಿದ್ದಾರೆ.ರಜೆಯಲ್ಲಿ ಕುಟುಂಬದ ಜೊತೆ ಹೇಡನ್ ಅವರು ಕ್ವೀನ್ಸ್ ಲ್ಯಾಂಡ್’ಗೆ ಹೋಗಿದ್ದರು,ಸಮುದ್ರದಲ್ಲಿ ತಮ್ಮ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದ ವೇಳೆ ಹೇಡನ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ