ನವದೆಹಲಿ:
ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧೆಯ ಅಂತಿಮ ಬೌಟ್‌ನಲ್ಲಿ ಉಕ್ರೇನ್‌ನ ಹನಾ ಒಕೋಟಾ ಅವರ ವಿರುದ್ಧ ಭಾರತದ ಎಂ.ಸಿ.ಮೇರಿ ಕೋಮ್ ಜಯಭೇರಿ ಭಾರಿಸುವ ಮೂಲಕ 6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಮೇರಿ ದಕ್ಷಿಣ ಕೊರಿಯಾದ ಕಿಮ್ ಹಾಂಗ್ ಮಿ ಅವರನ್ನು ಭಾರತದ ಬಾಕ್ಸರ್ ಮಣಿಸಿದ್ದರು. ಹನಾ ಒಕೋಟಾ ಸೆಮಿಫೈನಲ್‌ನಲ್ಲಿ ಜಪಾನ್‌ನ ಮಡೋಕಾ ವಾಡ ಅವರಿಗೆ ಸೋಲುಣಿಸಿದ್ದರು.
ಈ ಹಿಂದೆ ಕೋಮ್ 2002, 2005, 2006, 2008 ಹಾಗು 2010ರಲ್ಲಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
