ವಿಜಯಸಂಕಲ್ಪ ರಥಯಾತ್ರೆಗೆ ಆರಂಭದಲ್ಲೇ ವಿಘ್ವ…!

ಬೆಂಗಳೂರು

    ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಆರಂಭವಾದ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಗೆ ಆರಂಭದಲ್ಲೇ ವಿಘ್ವ ಎದುರಾಗಿದ್ದು ಯಾತ್ರೆಯ ನೇತೃತ್ವ ನೀಡದೆ ತಮ್ಮನ್ನು ನಿರ್ಲಕ್ಷಿಸಿದ್ದರಿಂದ ಕೆಂಡಾಮಂಡಲಗೊಂಡಿರುವ ವಸತಿ ಸಚಿವ ವಿ.ಸೋಮಣ್ಣ ಯಾತ್ರೆಯನ್ನು ಬಹಿಷ್ಕರಿಸಿದ್ದಾರೆ. ಪಕ್ಷದ ರಾಷ್ಟ್ರೀ ಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಸೇರಿದಂತೆ ಹಲ ಪ್ರಮುಖರು ಸೋಮಣ್ಣ ಅವರ ಅಸಮಾಧಾನವನ್ನು ಶಮನಗೊಳಿಸಲು ಯತ್ನಿಸಿದರೂ ಅದು ಸಫಲವಾಗದಿರುವುದು ಬಿಜೆಪಿ ಪಾಳೆಯದಲ್ಲಿ ಭಾರೀ ಸಂಚಲನವುಂಟು ಮಾಡಿದೆ.

    ಆ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿ.ಸೋಮಣ್ಣ ಅವರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹಿರಂಗವಾಗಿದ್ದು,ಸಚಿವ ಸಂಪುಟದಿAದ ತಮ್ಮನ್ನು ತೆಗೆದುಹಾಕಿದರೂ ಚಿಂತಿಸಲಾರೆ ಎಂದು ಸೋಮಣ್ಣ ವರಿಷ್ಟರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಮೂಲಸೌಕರ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಸಹಜವಾಗಿಯೇ ಮಲೆ ಮಹದೇಶ್ವರ ಬೆಟ್ಟದಿಂದ ಇಂದು ಆರಂಭವಾದ ವಿಜಯಸಂಕಲ್ಪ ರಥ ಯಾತ್ರೆಯ ನೇತೃತ್ವ ವಹಿಸಬೇಕಿತ್ತು.

    ಜಿಲ್ಲಾ ಉಸ್ತುವಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಸಚಿವರೆಂದು ಪಕ್ಷದ ವರಿಷ್ಟರಿಂದಲೇ ಶಭಾಷ್ ಗಿರಿ ಪಡೆದುಕೊಂಡಿದ್ದ ವಿ.ಸೋಮಣ್ಣ ಅವರಿಗೂ ವಿಜಯಸಂಕಲ್ಪ ಯಾತ್ರೆಯ ನೇತೃತ್ವವಮ್ನ ತಮಗೆ ವಹಿಸಲಾಗುತ್ತದೆಎಂಬ ನಿರೀಕ್ಷೆ ಇತ್ತು. ಆದರೆ ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾಗುವ ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆಯ ನೇತೃತ್ವವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವಹಿಸುವ ನಿರ್ಧಾರ ಪ್ರಕಟವಾಗಿದ್ದು ಸೋಮಣ್ಣ ಅವರನ್ನು ಕೆರಳಿಸಿತು.

    ಈ ಹಿನ್ನೆಲೆಯಲ್ಲಿಯೇ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಿಗದಿಯಾದ ವಿಜಯಸಂಕಲ್ಪ ಯಾತ್ರೆಗೆ ಬರುವುದಿಲ್ಲ ಎಂದು ತಿರುಗೇಟು ಹೊಡೆದುಬಿಟ್ಟರು. ಸೋಮಣ್ಣ ಅವರು ಕೈಗೊಂಡ ಈ ನಿರ್ಧಾರದಿಂದ ವಿಚಲಿಂತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಯಾತ್ರೆಗೆ ಬರುವಂತೆ ಒತ್ತಾಯಿಸಿದರಾದರೂ ಸೋಮಣ್ಣ ಅವರು ಬಿಲ್ ಕುಲ್ ಒಪ್ಪಲಿಲ್ಲ. ನಿಮ್ಮ ಬಗ್ಗೆ ನನಗೆ ಗೌರವವಿದೆ.ಆದರೆ ಸಚಿವ ಸಂಪುಟದ ಹಿರಿಯನಾದರೂ,ಜಿಲ್ಲಾ ಉಸ್ತುವಾರಿ ಸಚಿವನಾದರೂ ನನ್ನನ್ನು ಈಶ್ವರಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಿ,ಈ ತಂಡದೊಂದಿಗೆ ಹೋಗುವಂತೆ ನನಗೆ ಸೂಚಿಸಲಾಗಿದೆ.

    ಇದು ನನ್ನನ್ನು ಅಪಮಾನಿಸುವ ಕೆಲಸ.ಇದರ ಹಿಂದಿರುವ ಸೂತ್ರಧಾರರು ಯಾರು ಎಂಬುದು ನನಗೆ ಗೊತ್ತು.ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ.ಆದರೆ ನನಗೆ ಆಗಿರುವ ಅಪಮಾನವನ್ನು ನೋಡಿಕೊಂಡು ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಾರೆ ಎಂದು ಸೋಮಣ್ಣ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಒಂದು ಹಂತದಲ್ಲಿ ನೋವಿನಿಂದ ಮಾತನಾಡಿದ ಸಚಿವ ಸೋಮಣ್ಣ,ನನ್ನ ಈ ನಿಲುವಿಗಾಗಿ ನೀವು ನನ್ನನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿದರೂ ಪರವಾಗಿಲ್ಲ.ಆದರೆ ಆಗಿರುವ ಅವಮಾನವನ್ನು ಸಹಿಸಿಕೊಂಡು ಸುಮ್ಮನಿರಲು ನನಗೆ ಸಾಧ್ಯವಿಲ್ಲ ಎಂದರೆನ್ನಲಾಗಿದೆ.

    ಉನ್ನತ ಮೂಲಗಳ ಪ್ರಕಾರ,ಇದಾದ ನಂತರ ಸಂಘಪರಿವಾರದ  ನಾಯಕರಾದ ಬಿ.ಎಲ್.ಸಂತೋಷ್ ಅವರೂ ಸಚಿವ ಸೋಮಣ್ಣ ಅವರನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾರೆ.ಆದರೆ ಸೋಮಣ್ಣ ಅದಕ್ಕೂ ಬಗ್ಗಿಲ್ಲ. ಇದಾದ ನಂತರ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದ ಪಕ್ಷದ   ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಸಚಿವ ಸೋಮಣ್ಣ ಅವರಿಗೆ ದೂರವಾಣಿ ಕರೆ ಮಾಡಿ,ಮಲೆಮಹದೇಶ್ವರ ಬೆಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಾರೆ.

     ಆದರೆ ಪಕ್ಷದ  ಅಧ್ಯಕ್ಷರ ಮಾತಿಗೂ ಒಪ್ಪದ ಸೋಮಣ್ಣ.ಇದು ನನ್ನನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಕೆಲಸ.ಹೀಗಾಗಿ ಯಾವ ಕಾರಣಕ್ಕೂ ಈ ಯಾತ್ರೆಯಲ್ಲಿ ನಾನು ಪಾಲ್ಗೊಳ್ಳಲಾರೆ ಅಂತ ಖಡಾಖಂಡಿತವಾಗಿ ಹೇಳಿದರೆನ್ನಲಾಗಿದೆ. ಹೀಗೆ ಪಕ್ಷದ   ಅಧ್ಯಕ್ಷರು,ಸಂಘಪರಿವಾರದ ಪ್ರಮುಖರು ಮತ್ತು ಮುಖ್ಯಮಂತ್ರಿಗಳು ತಮ್ಮನ್ನು ಸಮಾಧಾನಿಸಲು ಯತ್ನಿಸಿದರೂ ಸಮಾಧಾನಿತರಾಗದ ವಸತಿ ಸಚಿವ ವಿ.ಸೋಮಣ್ಣ ಬುಧವಾರ ತಮ್ಮ ಸ್ವಕ್ಷೇತ್ರ ಗೋವಿಂದರಾಜ ನಗರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

     ಉನ್ನತ ಮೂಲಗಳ ಪ್ರಕಾರ,ವಿ.ಸೋಮಣ್ಣ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವೆ ಹಲ ಕಾಲದಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಆ ಗುದ್ದಾಟ ಇದೀಗ ಬಹಿರಂಗವಾಗಿದೆ. ಸೋವiಣ್ಣ ಅವರು ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆದು ನಿಂತಿದ್ದಲ್ಲದೆ ,ಸಂಘಪರಿವಾರದ ಪ್ರಮುಖ ನಾಯಕ ಬಿ.ಎಲ್.ಸಂತೋಷ್ ಅವರ ಜತೆ ಗುರುತಿಸಿಕೊಂಡಿದ್ದು ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣ ಎಂಬುದು ಮೂಲಗಳ ಹೇಳೀಕೆ.

    ಇದೇ ಕಾರಣಕ್ಕಾಗಿ ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ನೋಡಿಕೊಂಡಿದ್ದ ಸೋಮಮಣ್ಣ ಅವರನ್ನು ರಾತ್ರೋ ರಾತ್ರಿ ಮೈಸೂರು ಜಿಲ್ಲೆಯ ಉಸ್ತುವಾರಿಯಿಂದ ವಿಮುಕ್ತಿಗೊಳಿಸಿ,ಚಾಮರಾಜ ನಗರ ಜಿಲ್ಲೆಗೆ ಎತ್ತಂಗಡಿ ಮಾಡಿದ್ದರು. ಈ ಬೆಳವಣಿಗೆಯಿಂದ ನೊಂದರೂ ಬಹಿರಂಗವಾಗಿ ಏನನ್ನೂ ಹೇಳದ ವಿ.ಸೋಮಣ್ಣ ಅವರು,ಚಾಮರಾಜ ನಗರ ಜಿಲ್ಲೆಯ ಉಸ್ತುವಾಗಿ ವಹಿಸಿಕೊಂಡಿದ್ದರು.

     ಆದರೆ ಇದೀಗ ತಾವು ಉಸ್ತುವಾರಿ ವಹಿಸಿಕೊಂಡ ಜಿಲ್ಲೆಯಲ್ಲೂ ತಮ್ಮನ್ನು ನಿರ್ಲಕ್ಷ್ಯ ಮಾಡಿ ವಿಜಯಸಂಕಲ್ಪ ರಥಯಾತ್ರೆ ಮಾಡುವ ನಿರ್ಧಾರ ಸೋಮಣ್ಣ ಅವರನ್ನು ಕೆರಳಿಸಿದೆ. ಇದೇ ಮೂಲಗಳ ಪ್ರಕಾರ,ಪಕ್ಷದಲ್ಲಿ ಪುನ: ಬಿ.ಎಸ್.ಯಡಿಯೂರಪ್ಪ ಅವರಿಗೆ ಆದ್ಯತೆ ನೀಡಲು ವರಿಷ್ಟರು ನಿರ್ಧರಿಸಿದ್ದು,ಪ್ರತಿಯೊಂದಕ್ಕೂ ಅವರ ಸಲಹೆಯನ್ನು ಪಡೆಯತೊಡಗಿದ್ದಾರೆ. ಪರಿಣಾಮವಾಗಿ ರಾಜ್ಯ ಬಿಜೆಪಿಯಲ್ಲಿ ಆದ್ಯತೆ ಪಡೆದಿರುವ ಯಡಿಯೂರಪ್ಪ ಅವರು,ಮಲೆಮಹದೇಶ್ವರ ಬೆಟ್ಟದ ರಥಯಾತ್ರೆಗೆ ಈಶ್ವರಪ್ಪ ನೇತೃತ್ವದ ತಂಡ ರಚನೆಯಾಗುವಂತೆ ನೋಡಿಕೊಂಡಿದ್ದಾರೆ.

    ಆ ಮೂಲಕ ತಮ್ಮನ್ನು ಅವಮಾನಿಸಿದ್ದಾರೆ ಎಂಬುದು ಸೋಮಣ್ಣ ಅವರ ನೋವು. ಅವರ ಈ ನೋವು ಇದೀಗ ಆಕ್ರೋಶವಾಗಿ ಪರಿವರ್ತನೆಯಾಗಿದ್ದು ಯಾತ್ರೆಗೆ ಬಹಿಸ್ಕಾರ ಹಾಕುವ ಹಂತಕ್ಕೆ ತಂದು ನಿಲ್ಲಿಸಿದೆ ಮತ್ತು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಸಂಚಲನ ಸೃಷ್ಟಿಯಾಗುವಂತೆ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap