“ಮೀಸಲಾತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ” : ರಾಹುಲ್‌ ಗಾಂಧಿ

ನವದೆಹಲಿ: 

   ಬಿಜೆಪಿ “ಬಹುಜನ ವಿರೋಧಿ” ಎಂದು ಆರೋಪಿಸಿದ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಕೇಸರಿ ಪಕ್ಷ ಎಷ್ಟೇ ಸುಳ್ಳುಗಳನ್ನು ಹರಡಿದರೂ “ಮೀಸಲಾತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ” ಎಂದು ಸೋಮವಾರ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ‘ಜಾತಿ ಗಣತಿ’ ಎಂಬ ಪದವನ್ನು ಹೇಳಲೂ ಹೆದರುತ್ತಾರೆ ಮತ್ತು ‘ಬಹುಜನರು’ ತಮ್ಮ ಹಕ್ಕುಗಳನ್ನು ಪಡೆಯುವುದು ಅವರಿಗೆ ಇಷ್ಟವಿಲ್ಲ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

   “ಬಹುಜನ ವಿರೋಧಿ ಬಿಜೆಪಿ ಎಷ್ಟೇ ಸುಳ್ಳುಗಳನ್ನು ಹರಡಲಿ – ಮೀಸಲಾತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ” ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ. ‘ಸಮಗ್ರ ಜಾತಿ ಗಣತಿ ನಡೆದು ಪ್ರತಿ ವರ್ಗದ ಹಕ್ಕು, ಪಾಲು, ನ್ಯಾಯ ಸಿಗುವವರೆಗೆ ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ತೆಗೆದು ಹಾಕುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದಿದ್ದಾರೆ.

   “ನಾನು ಮತ್ತೊಮ್ಮೆ ಹೇಳುತ್ತೇನೆ – ನನಗೆ ಇದು ರಾಜಕೀಯ ವಿಷಯವಲ್ಲ, ಬಹುಜನರಿಗೆ ನ್ಯಾಯ ದೊರಕಿಸಿಕೊಡುವುದು ನನ್ನ ಜೀವನದ ಧ್ಯೇಯವಾಗಿದೆ” ಎಂದು ಪ್ರತಿಪಕ್ಷ ನಾಯಕ ಹೇಳಿದ್ದಾರೆ

Recent Articles

spot_img

Related Stories

Share via
Copy link