ಕ್ಯಾನ್ಸರ್ ಚಿಕಿತ್ಸೆ : ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ ಪರಿಚಯಿಸಿದ ಆಸ್ಟರ್‌ ಆಸ್ಪತ್ರೆ.

ಬೆಂಗಳೂರು

   ಆಸ್ಟರ್ ಆಸ್ಪತ್ರೆ ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ (IOeRT) ಅನ್ನು ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಚಿಕಿತ್ಸೆ ಯನ್ನು ನೀಡಲು ಪರಿಚಯಿಸುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಲಭ್ಯವಿರುವ ಈ ಕ್ರಾಂತಿಕಾರಿ ವಿಧಾನವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೂಕ್ಷ್ಮ ರೇಡಿಯೇಶನ್ ಅನ್ನು ನೀಡುವ ಮೂಲಕ ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಉದ್ದೇಶಿಸಲಾಗಿದೆ, ಈ ಚಿಕಿತ್ಸೆ ಶರೀರದಲ್ಲಿ ಹೆಚ್ಚು ಹಾನಿಯಾಗುವುದನ್ನು ಕಡಿಮೆ ಮಾಡಿ ರೋಗಿಯೂ ಶೀಘ್ರ ಗುಣಮುಖರಾಗಲು ಸಹಾಯ ಮಾಡುತ್ತದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
IOeRT ಚಿಕಿತ್ಸೆಯ ಪ್ರಯೋಜನಗಳು
• ನಿಖರ ಚಿಕಿತ್ಸೆ: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೇಡಿಯೇಶನ್ ಚಿಕಿತ್ಸೆಯನ್ನು ನಿಖರವಾಗಿ ನೀಡಲು ಸಾಧ್ಯವಾಗುತ್ತದೆ.
• ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವುದು: ಅನಾರೋಗ್ಯದ ದೇಹದ ಭಾಗಗಳಿಗೆ ರೇಡಿಯೇಶನ್ ಪ್ರಭಾವವನ್ನು ಕಡಿಮೆಮಾಡುತ್ತದೆ.
• ಶೀಘ್ರ ಚೇತರಿಕೆ: ರೋಗಿಗಳು ಶೀಘ್ರವಾಗಿ ಚೇತರಿಕೆ ಕಾಣಲು ಸಹಾಯಮಾಡುತ್ತದೆ, ಇದರಿಂದ ಅವರು ಶೀಘ್ರವಾಗಿ ದಿನನಿತ್ಯದ ಚಟುವಟಿಕೆಗಳನ್ನು ಮತ್ತೆ ಪ್ರಾರಂಭಿಸಲು ಸಾಧ್ಯವಾಗುತ್ತದೆ.

   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಉಪ ನಿರ್ವಹಣಾ ನಿರ್ದೇಶಕಿ ಅಲಿಷಾ ಮುಪ್ಪನ್ , “ಆಸ್ಟರ್ ಆಸ್ಪತ್ರೆಗಳಲ್ಲಿ IOeRT ಅನ್ನು ಪರಿಚಯಿಸುತ್ತಿರುವುದು ಭಾರತದಲ್ಲಿ ಕ್ಯಾನ್ಸರ್‌ ಆರೈಕೆಯ ಪ್ರಮುಖ ಹಂತವಾಗಿದೆ. ಉತ್ತಮ ಫಲಿತಾಂಶಗಳು ಮತ್ತು ಉತ್ತಮ ಜೀವನದ ಗುಣಮಟ್ಟವನ್ನು ಪಡೆಯಲು ನಾವು ನಮ್ಮ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಲು ಈ ವ್ಯವಸ್ಥೆಯನ್ನು ಮಾಡಲಿದ್ದೇವೆ.

   ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಶ್ರೀ ಶಿವಕುಮಾರ ಕೆ ಬಿ, ಐಎಎಸ್‌ ಮಾತನಾಡಿ ಕ್ಯಾನ್ಸರ್‌ ಚಿಕಿತ್ಸೆಗೆ ದಿನೇ ದಿನೇ ಹೊಸ ಆವಿಷ್ಕಾರ ನಡೆಯುತ್ತಲೇ ಇದೆ. ಈ ನೂತನ ಚಿಕಿತ್ಸಾ ವಿಧಾನ ಅಳವಡಿಸಿಕೊಂಡಲ್ಲಿ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗೆ ಸಹಕಾರಿಯಾಗಲಿದೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯದ ರೋಗಿಗಳು ಈ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.

   ಪತ್ರಿಕಾಗೋಷ್ಠಿಯಲ್ಲಿ ಡಾ. ಸೋಮಶೇಖರ್ ಎಸ್ ಪಿ, ಆಸ್ಟರ್ ಅಂತರಾಷ್ಟ್ರೀಯ ಆನ್‌ಕೋಲಾಜಿ ಸಂಸ್ಥೆಯ ಜಾಗತಿಕ ನಿರ್ದೇಶಕ, ಡಾ. ಎಮ್ ಎಸ್ ಬೆಲ್ಲಿಯಪ್ಪ, ಆಸ್ಟರ್ ಆಸ್ಪತ್ರೆಗಳಲ್ಲಿ ರೇಡಿಯೇಶನ್ ಆನ್‌ಕೋಲಾಜಿಯ ಹೆಡ್ ಮತ್ತು ಲೀಡ್ ಕನ್ಸಲ್ಟಂಟ್, ಮತ್ತು ಫ್ರಾನ್ಸಿಸ್ಕೋ ಝಾನೆಟ್ಟಿ, ಎಸ್‌ಐಟಿ ಸೊರ್ಡಿನಾ ಅಧ್ಯಕ್ಷ ಮತ್ತು ಸಿಇಒ ಉಪಸ್ಥಿತರಿದ್ದರು. ಅವರು IOeRT ಯ ಪರಿಣಾಮಕಾರಿ ಶಕ್ತಿಯ ಬಗ್ಗೆ ಚರ್ಚಿಸಿ ತಿಳಿಸಿದರು.

   ಈ ಘಟನೆ ಭಾರತದಲ್ಲಿ ಹೊಸ ಆರೋಗ್ಯ ಪರಿಹಾರಗಳನ್ನು ಹೊಂದಲು ಮಹತ್ವದ ಕೆಲಸಮಾಡುತ್ತದೆ, ಮತ್ತು ಆಸ್ಟರ್ ಆಸ್ಪತ್ರೆಗಳು ಸುಧಾರಿತ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯಕೀಯ ಚಿಕಿತ್ಸೆಗೆ ನಿರಂತರವಾಗಿ ಶ್ರಮಿಸುತ್ತಿದ್ದು ಕ್ಯಾನ್ಸರ್‌ ಚಿಕಿತ್ಸೆ ಮತ್ತು ಆರೈಕೆಯನ್ನು ಮಾಡಲು ಬದ್ಧವಾಗಿದೆ ಎಂದು ತಿಳಿಸಿದರು

Recent Articles

spot_img

Related Stories

Share via
Copy link
Powered by Social Snap