ಬೆಂಗಳೂರು
ವಿಧಾನ ಸೌಧದಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 14 ಲಕ್ಷ ನಗದ ಹಣ ವಶಪಡಿಸಿಕೊಂಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿಯವರ ಕಚೇರಿಯ ಟೈಪಿಸ್ಟ್ ಮೋಹನ್ ಎಂಬುವವರು ಹಣವನ್ನು ಸಾಗಿಸುತ್ತಿದ್ದ,ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು.ಬಂಧಿತ ನೀಡಿರುವ ಮಾಹಿತಿ ಪ್ರಕಾರ 14 ಲಕ್ಷ ನಗದು ಹಣವನ್ನು ಗುತ್ತಿಗೆದಾರರು ನೀಡಿದ್ದು ಅದನ್ನು ಬ್ಯಾಗಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಸಂಬಂಧ ವಿಧಾನ ಸೌಧದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ನಡೆಸುತ್ತಿದ್ದಾರೆ.ಈ ಹಣ ಎಲ್ಲಿಂದ ಬಂತು, ಲಂಚದ ಹಣವೊ,ಅಥವಾ ಗುತ್ತಿಗೆದಾರರು ನೀಡಿದ ಕಮಿಷನ್ ಹಣವೋ ಅಥವಾ ಕಡತ ವಿಲೇವಾರಿ ಮಾಡಲು ಪಡೆದ ಹಣವೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬೋರ್ ವೆಲ್ ಕೊರೆಯುವ ಗುತ್ತಿಗೆದಾರರು ಕಮಿಷನ್ ಹಣವನ್ನು ಟೈಪಿಸ್ಟ್ ಮೋಹನ್ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ 21 ರ ಕೆಂಗಲ್ ಗೇಟ್ ಬಳಿ ವೋಕ್ಸ ವ್ಯಾಗನ್ ಕಾರಿನ ಹಿಂಬದಿ ಸೀಟಿನಲ್ಲಿ ಬಾಕ್ಸ್ ನಲ್ಲಿ 2.5 ಕೋಟಿ ನಗದ ಪತ್ತೆಯಾಗಿತ್ತು.ಈ ಹಣ ವಕೀಲ ಸಿದ್ದಾರ್ಥ ಎಂಬುವವರದಾಗಿತ್ತು.ತನಿಖೆ ಬಳಿಕ 1.95 ಕೋಟಿ ಮೊತ್ತಕ್ಕೆ ದಾಖಲೆ ಸಲ್ಲಿಕೆಯಾಗಿರಲಿಲ್ಲ.
ವಿಧಾನ ಸೌಧದಲ್ಲಿ ಇತ್ತೀಚಿಗೆ ನಗದು ವಶಪಡಿಸಿಕೊಂಡ ಎರಡನೆ ಪ್ರಕರಣ ಇದಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
