ದುಬಾರಿ ಜೀವನ ಶೈಲಿಯಿಂದಾಗಿ ಒಂದು ಮಕ್ಕಳನ್ನು ಸಾಕೋದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನರು ಒಂದು ಇಲ್ಲವೆ ಎರಡು ಮಕ್ಕಳು ಸಾಕು ಎನ್ನುತ್ತಿದ್ದಾರೆ. ಕೆಲವರಿಗೆ ಮಕ್ಕಳೆಂದ್ರೆ ಅಪಾರ ಪ್ರೀತಿ. ಹಾಗಾಗಿ ಸಂತಾನದ ಸಂಖ್ಯೆ ನಾಲ್ಕಾಗುವವರೆಗೆ ಸುಮ್ಮನಿರೋದಿದೆ.
ಆದ್ರೆ ಇಲ್ಲೊಬ್ಬ ಮಹಿಳೆ ತನ್ನ 26ನೇ ವಯಸ್ಸಿನಲ್ಲಿ 22 ಮಕ್ಕಳನ್ನು ಪಡೆದಿದ್ದಾಳೆ. ಆಕೆಯ ಆಸೆ ಇಲ್ಲಿಗೆ ನಿಂತಿಲ್ಲ. 105 ಮಕ್ಕಳನ್ನು ಪಡೆಯುವ ಗುರಿಯನ್ನು ಆಕೆ ಹೊಂದಿದ್ದಾಳೆ.
105 ಮಕ್ಕಳನ್ನು ಪಡೆಯುವ ಆಸೆ ಹೊಂದಿರುವ ಮಹಿಳೆ ಹೆಸರು ಕ್ರಿಸ್ಟಿನಾ. ಆಕೆ ಮನೆಯಲ್ಲಿರುವ ಬಹುತೇಕ ಮಕ್ಕಳ ವಯಸ್ಸು ಎರಡರಿಂದ ಮೂರು ವರ್ಷ. ಎರಡು – ಮೂರು ವರ್ಷದ ಮಕ್ಕಳನ್ನು ಸಾಕೋದು ಸವಾಲಿನ ಕೆಲಸ. ಆದ್ರೆ ಕ್ರಿಸ್ಟಿನಾ ಇದನ್ನು ಎಂಜಾಯ್ ಮಾಡ್ತಿದ್ದಾಳೆ. ಆಕೆ ದೊಡ್ಡ ಮಗಳಿಗೆ ಈಗ ಎಂಟು ವರ್ಷ. ಮೊದಲ ಪತಿಯಿಂದ ಹುಟ್ಟಿದ ಮಗು ಇದು. ಈ ಮಗು ಕ್ರಿಸ್ಟಿನಾ ಹೊಟ್ಟೆಯಲ್ಲಿ ಹುಟ್ಟಿದ್ದಾಳೆ. ಆದ್ರೆ ಉಳಿದ ಮಕ್ಕಳನ್ನು ಕ್ರಿಸ್ಟಿನಾ, ಬಾಡಿಗೆ ತಾಯಂದಿರಿಂದ ಪಡೆದಿದ್ದಾಳೆ.
ಕ್ರಿಸ್ಟಿನಾಳ ಹದಿನಾಲ್ಕು ಮಕ್ಕಳ ವಯಸ್ಸು ಮೂರು ವರ್ಷ. ಆರು ಮಕ್ಕಳ ವಯಸ್ಸು ಎರಡು ವರ್ಷ. 2021ರಲ್ಲಿ ಆಕೆಯ ಕೊನೆಯ ಮಗಳು ಜನಿಸಿದ್ದಾಳೆ. ರಷ್ಯಾ ನಿವಾಸಿಯಾಗಿರುವ ಕ್ರಿಸ್ಟಿನಾ ಜಾರ್ಜಿಯಾದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದಾಳೆ. ಆಕೆ ಪತಿ ಕೋಟ್ಯಾಧಿಪತಿ. ಆತ ಕ್ರಿಸ್ಟಿನಾಗಿಂತ ವಯಸ್ಸಿನಲ್ಲಿ 32 ವರ್ಷ ದೊಡ್ಡವನು. ಅಂದ್ರೆ ಆತನಿಗೆ ಈಗ 58 ವರ್ಷ ವಯಸ್ಸಾಗಿದೆ.
ಕ್ರಿಸ್ಟಿನಾ ಪತಿ ಹೆಸರು ಗೌಲಿಪ್. ಆತ ಹೊಟೇಲ್ ಮಾಲಿಕ. ಆದ್ರೆ ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿದ್ರೂ ಕ್ರಿಸ್ಟಿನಾಗೆ ಆಕೆ ಪತಿ ನೆರವಾಗ್ತಿದ್ದಾನೆ.