ನವದೆಹಲಿ:
ಇದೇ ತಿಂಗಳ ಮಾರ್ಚ್ 9ರಂದು ಪಂಜಾಬ್‌ನ ಅಂಬಾಲಾದಿಂದ ಬ್ರಹ್ಮೋಸ್ ಮಧ್ಯಮ ಶ್ರೇಣಿಯ ಕ್ಷಿಪಣಿಯನ್ನು ಭಾರತೀಯ ವಾಯು ಪಡೆ ಉಡಾವಣೆ ಮಾಡಿತ್ತು. ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪಾಕಿಸ್ತಾನದ ಗಡಿಯೊಳಗೆ 125 ಕಿಲೋಮೀಟರ್ ಕ್ರಮಿಸಿ ಮಿಯಾನ್ ಶಾನು ಎಂಬಲ್ಲಿ ಪತನಗೊಂಡಿತ್ತು.ಈ ಕ್ಷಿಪಣಿ ಕೆಲವು ಮನೆಗಳಿಗೆ ಹಾನಿ ಮಾಡಿತ್ತು. ಆದರೆ ಯಾವುದೇ ಸಾವು ನೋವು ಉಂಟಾಗಿರಲಿಲ್ಲ. ಇದಕ್ಕೆ ಪ್ರತಿಯಾಗಿ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಲು ಪಾಕಿಸ್ತಾನ ಸರ್ಕಾರ ಯೋಜನೆ ಹಾಕಿಕೊಂಡಿತ್ತು ಎಂಬ ಆತಂಕಕಾರಿ ವರದಿಯನ್ನು ಬ್ಲೂಮ್ ಬರ್ಗ್ ನೀಡಿದೆ.
ಆಂತರಿಕ ತನಿಖೆ ಬಳಿಕ ಸುಮ್ಮನಾಗಿದ್ದ ಪಾಕಿಸ್ತಾನಭಾರತದ ಕ್ಷಿಪಣಿ ಪಾಕಿಸ್ತಾನದ ಭೂ ಭಾಗದಲ್ಲಿ ಬೀಳುತ್ತಿದ್ದಂತೆ ಪಾಕಿಸ್ತಾನ ಸೇನೆ ಅಲರ್ಟ್ ಆಗಿತ್ತು. ಬಳಿಕ ಏನೋ ತಪ್ಪಾಗಿದೆ ಎನ್ನುವುದು ಆರಂಭಿಕ ತನಿಖೆಗಳು ಸೂಚನೆ ನೀಡಿದ್ದರಿಂದ ಪಾಕಿಸ್ತಾನ ತನ್ನ ಪ್ರತಿ ದಾಳಿಯನ್ನು ತಡೆಹಿಡಿದಿತ್ತು ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಸೇನಾ ಹಾಟ್ ಲೈನ್ ಬಳಕೆ ಮಾಡದೇ ಇದ್ದ ಅಧಿಕಾರಿಗಳು
ಪಾಕಿಸ್ತಾನಕ್ಕೆ ಈ ಘಟನೆ ಬಗ್ಗೆ ವಿವರಣೆ ನೀಡಲು ಭಾರತ ಹಾಗೂ ಪಾಕಿಸ್ತಾನ ಎರಡೂ ಕಡೆ ಇರುವ ಹಿರಿಯ ಸೇನಾ ಕಮಾಂಡರ್‌ಗಳ ನೇರ ಹಾಟ್‌ಲೈನ್ ಅನ್ನು ಭಾರತ ಬಳಸಿರಲಿಲ್ಲ. ಹೆಚ್ಚಿನ ಉಡಾವಣೆಗಳು ಆಗದಂತೆ ತಡೆಯಲು ಕ್ಷಿಪಣಿ ವ್ಯವಸ್ಥೆಗಳನ್ನು ವಾಯುಪಡೆ ಅಧಿಕಾರಿಗಳು ಸ್ಥಗಿತಗೊಳಿಸಲು ಮುಂದಾಗಿದ್ದರು ಎಂದು ವರದಿ ತಿಳಿಸಿದೆ.
https://prajapragathi.com/decreased-crude-oil-people-lose-little-petrol-diesel-high/
ಭಾರತವನ್ನು ಬೆಂಬಲಿಸಿದ್ದ ಅಮೆರಿಕಾ
ಇನ್ನು ಈ ಘಟನೆಯಲ್ಲಿ ಯುಎಸ್ (US) ಕೂಡ ಭಾರತವನ್ನು ಬೆಂಬಲಿಸಿತ್ತು. ಈ ಘಟನೆಯು ತಪ್ಪಾಗಿ ಆಗಿದ್ದೇ ಹೊರತುಪಡಿಸಿ ಬೇರೇನೂ ಅಲ್ಲ, ಇದು ಯುದ್ಧದ ಪ್ರಚೋದನೆ ಆಗಿರಲಿಲ್ಲ ಅಂತ ಅಮೆರಿಕಾ ತಿಳಿಸಿತ್ತು.
ವರದಿ ಬಗ್ಗೆ ಪ್ರತಿಕ್ರಿಯೆಗೆ ಸೇನಾ ಅಧಿಕಾರಿಗಳ ನಿರಾಕರಣೆ
ಇನ್ನು ಈ ವರದಿ ಬಗ್ಗೆ ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಕ್ಷಿಪಣಿಯು ಹರ್ಯಾಣದ ಸಿರ್ಸಾದಿಂದ ಉಡಾವಣೆಯಾಗಿರುವುದೆಂದು ಪತ್ತೆ ಹಚ್ಚಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ನಗರದಲ್ಲಿ ಪತನಗೊಂಡಿದೆ ಎಂದು ಅಲ್ಲಿನ ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತೀಕರ್ ಹೇಳಿದ್ದರು.
ಸಂಸತ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಜನಾಥ್ ಸಿಂಗ್
ಈ ಘಟನೆ ಬಗ್ಗೆ ಸಂಸತ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದರು. ದೈನಂದಿನ ನಿರ್ವಹಣಾ ಪ್ರಕ್ರಿಯೆ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಉಂಟಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಸರ್ಕಾರವು ಈ ಘಟನೆ ಬಳಿಕ ಕಾರ್ಯಾಚರಣೆ, ನಿರ್ವಹಣೆ ಮತ್ತು ತಪಾಸಣೆಗಳ ನಿರ್ದಿಷ್ಟ ಕಾರ್ಯನಿರ್ವಹಣೆ ಪ್ರಕ್ರಿಯೆಗಳನ್ನು ಪರಾಮರ್ಶಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದರು.