ಉಕ್ರೇನ್‌ ವಿರುದ್ದ ಪರಮಣುಅಸ್ತ್ರ ಬಳಸಲು ಮುಂದಾಯ್ತ ರಷ್ಯಾ…?

ಮಾಸ್ಕೋ:

     ಉಕ್ರೇನ್ ವಿರುದ್ಧ ಜಿದ್ದಿಗೆ ಬಿದ್ದು ಹೋರಾಡುತ್ತಿರುವ ರಷ್ಯಾ ತನ್ನ ಉಗ್ರಾಣದ ಒಳಗಿಟ್ಟಿದ್ದ ಭಯಾನಕ ಅಸ್ತ್ರಗಳನ್ನು ಒಂದೊಂದಾಗಿ ಹೊರಗೆ ತೆಗೆಯುತ್ತಿದೆ. ಇದೀಗ ನೇರ ತನ್ನ ಸ್ನೇಹಿತ ಬೆಲಾರಸ್ ಗಡಿಗೆ ಪರಮಾಣು ಅಸ್ತ್ರ ರವಾನಿಸಿದೆ. ಈ ಮೂಲಕ ಅಮೆರಿಕ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ತೊಡೆತಟ್ಟಿದ್ದು ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಬಾಂಬ್ ಅಟ್ಯಾಕ್ ಪಕ್ಕಾನಾ?

    ಉಕ್ರೇನ್ & ರಷ್ಯಾ ನಡುವೆ ಯುದ್ಧ ಆರಂಭವಾಗಿ ಇಂದಿಗೆ ಸರಿಯಾಗಿ 477ನೇ ದಿನ. ಹೀಗೆ ಎರಡೂ ರಾಷ್ಟ್ರಗಳ ಯುದ್ಧ 16 ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಇನ್ನೇನು 500 ದಿನಗಳನ್ನು ಕೂಡ ಯುದ್ಧ ಪೂರೈಸಲಿದೆ. ಆದರೆ ಈ ಸಂದರ್ಭದಲ್ಲೇ ರೊಚ್ಚಿಗೆದ್ದ ರಷ್ಯಾ ಉಗ್ರಾಣದ ಒಳಗಿಟ್ಟಿದ್ದ ಡೆಡ್ಲಿ ನ್ಯೂಕ್ಲಿಯರ್ ವೆಪನ್ ಹೊರತೆಗೆದಿದೆ.

    ಅಮೆರಿಕ ಅದೆಷ್ಟೇ ಬಾಯಿ ಬಡಿದುಕೊಂಡರೂ ಕೇರ್ ಮಾಡದೆ, ನೇರವಾಗಿ ನ್ಯೂಕ್ಲಿಯರ್ ಅಸ್ತ್ರಗಳನ್ನು ತನ್ನ ಸ್ನೇಹಿತ ಬೆಲಾರಸ್‌ಗೆ ಕೊಟ್ಟು ಕಳುಹಿಸಿದೆ. ಆದರೆ ಇಲ್ಲಿ ಭಯ ಪಡುವ ಪರಿಸ್ಥಿತಿ ಯಾಕೆ ಎದುರಾಗಿದೆ ಎಂದರೆ, ಬೆಲಾರಸ್ ಗಡಿಯಿಂದ ಕೇವಲ 200 ಕಿಲೋ ಮೀಟರ್ ದೂರದಲ್ಲಿ ಉಕ್ರೇನ್‌ನ ರಾಜಧಾನಿ ಇದೆ!

   ಹೌದು, ಇದೇ ವಿಚಾರ ಈಗ ಇಡೀ ಜಗತ್ತಿನ ನಿದ್ದೆ ಕೆಡಿಸಿದೆ. ಮೊದಲೇ ಎರಡು ದೇಶಗಳು ಕಚ್ಚಾಡುತ್ತಿವೆ. ಉಕ್ರೇನ್ ವಿರುದ್ಧ ರಷ್ಯಾ ಭೀಕರ ದಾಳಿ ನಡೆಸುತ್ತಿದೆ, ರಷ್ಯಾದ ವಿರುದ್ಧ ಉಕ್ರೇನ್ ಕೂಡ ಡೆಡ್ಲಿ ಅಟ್ಯಾಕ್ ನಡೆಸುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಉಕ್ರೇನ್ ರಾಜಧಾನಿಗೆ ಸಮೀಪದಲ್ಲೇ ಇರುವ ಬೆಲಾರಸ್ ಗಡಿಗೆ ರಷ್ಯಾ ಪರಮಾಣು ಅಸ್ತ್ರ ಕಳಿಸಿದ್ದು ಯಾಕೆ? ಎಂಬ ಪ್ರಶ್ನೆ ಜಗತ್ತನ್ನ ಕಾಡುತ್ತಿದೆ. ತನ್ನ ಮೇಲಿನ ದಾಳಿಗೆ ಪ್ರತಿಬಾರಿ ಎಚ್ಚರಿಕೆ ನೀಡುತ್ತಾ ಬಂದಿರುವ ರಷ್ಯಾ ಈಗ ನೇರವಾಗಿ ಉಕ್ರೇನ್ ಮುಗಿಸಲು ಹೊರಟಿತಾ? ಕೆಲವೇ ದಿನದಲ್ಲಿ ಪರಮಾಣು ದಾಳಿ ನಡೆಯುತ್ತಾ? ಎಂದು ಭಯಪಡುತ್ತಿದೆ ಯುರೋಪ್.

    ಬೆಲಾರಸ್‌ನಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸಲಿರುವ ವರದಿ ನೋಡಿ ಭಯಪಟ್ಟ ಅಮೆರಿಕ ಕಳೆದ ತಿಂಗಳು ಪರೋಕ್ಷವಾಗಿ ಎಚ್ಚರಿಕೆ ನೀಡಿತ್ತು. ಆದರೆ ಅಮೆರಿಕ ಅದೆಂತಹ ಮಾತನ್ನೇ ಹೇಳಿದರೂ ರಷ್ಯಾ ತಿರುಗೇಟು ನೀಡಿ ಹಠ ಸಾಧಿಸಿದೆ. ಅಮೆರಿಕ ವಾರ್ನಿಂಗ್‌ಗೂ ಡೋಂಟ್ ಕೇರ್ ಅಂತಿದೆ. ಇನ್ನು ಈ ಸಂದರ್ಭದಲ್ಲೇ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ‘

   1945ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಾಸಾಕಿ ನಗರಗಳನ್ನು ನಾಶಪಡಿಸಿದ ಪರಮಾಣು ಬಾಂಬುಗಳಿಗಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿಯಾದ ಬಾಂಬ್ ಇದಾಗಿದೆ’ ಎಂದಿದ್ದಾರೆ ಲುಕಾಶೆಂಕೊ! ಇದು ಉಕ್ರೇನ್ ಎದೆ ನಡುಗಿಸಿದೆ.

    ಪರಮಾಣು ಬಾಂಬ್ ಬಳಸುವ ಕೃತ್ಯಕ್ಕೆ ರಷ್ಯಾ ಕೈಹಾಕಲ್ಲ ಎಂದೇ ಯುರೋಪ್ ಈವರೆಗೆ ಭಾವಿಸಿತ್ತು. ಆದರೆ ಬೆಲಾರಸ್‌ಗೆ ರಷ್ಯಾದ ನ್ಯೂಕ್ಲಿಯರ್ ಅಥವಾ ಪರಮಾಣು ಬಾಂಬ್‌ನ ಮೊದಲ ಬ್ಯಾಚ್ ತಲುಪಿದೆ. ಈ ವಿಚಾರವನ್ನ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಬೆಲಾರಸ್‌ಗೆ ಮೊದಲ ಬ್ಯಾಚ್‌ನಲ್ಲಿ ಪರಮಾಣು ಶಸ್ತ್ರಗಳು ತಲುಪಿರುವುದನ್ನ ಕನ್ಫರ್ಮ್ ಮಾಡಿದ್ದಾರೆ. ಹೀಗಾಗಿ ನಿಜ ಭಯ ಇಲ್ಲಿಂದಲೇ ಶುರುವಾಗಿದೆ ಎನ್ನಬಹುದು. ಏಕೆಂದರೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳು ಈಗ ತಲುಪಿರುವ ಜಾಗದಿಂದ ಕೂಗಳತೆ ದೂರದಲ್ಲಿ ಉಕ್ರೇನ್ ರಾಜಧಾನಿ ಕೀವ್ ಇದೆ!

   ಹೀಗೆ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧದ ಕಿಚ್ಚಿಗೆ ರಷ್ಯಾ ತನ್ನ ಶಸ್ತ್ರಗಾರಗಳಲ್ಲಿ ಇಟ್ಟಿರುವ ಡೆಡ್ಲಿ ವೆಪನ್‌ಗಳನ್ನ ಹೊರತೆಗೆಯುತ್ತಿದೆ. ಈಗ ಮೊದಲ ಬ್ಯಾಚ್‌ನಲ್ಲಿ ಮಾತ್ರ ಪರಮಾಣು ಅಸ್ತ್ರಗಳು ಬೆಲಾರಸ್ ತಲುಪಿದ್ದು, ಇನ್ನು ಕೆಲ ದಿನದಲ್ಲಿ ಭಾರಿ ಪ್ರಮಾಣದಲ್ಲಿ ಇದೇ ರೀತಿ ನ್ಯೂಕ್ಲಿಯರ್ ವೆಪನ್ಸ್ ಬೆಲಾರಸ್ ಗಡಿ ತಲುಪುವ ಸಾಧ್ಯತೆ ಇದೆ. ಹೀಗೆ ರಷ್ಯಾ & ಉಕ್ರೇನ್ ಯುದ್ಧ ಜೋರಾಗಿದೆ. ಈ ಎಲ್ಲಾ ಬೆಳವಣಿಗೆ ಪರಿಣಾಮ ಪರಮಾಣು ಅಸ್ತ್ರ ಬಳಸುತ್ತಾ ರಷ್ಯಾ? ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap