ಮಂಗಳೂರು
ಸ್ವಂತ ಉಪಯೋಗಕ್ಕೆಂದು ಕಟ್ಟಿಸಿದ್ದ ಸ್ವಿಮ್ಮಿಂಗ್ ಫೂಲ್ ಅನ್ನು ಬಂಡವಾಳವಾಗಿಸಿಕೊಂಡ ಇಸ್ರೇಲ್‌ನ ಉದ್ಯಮಿಯೊಬ್ಬ ಬಸ್ತಿಕೋಡಿಯಲ್ಲಿನ ತನ್ನ ಮನೆಯ ಸ್ವಿಮ್ಮಿಂಗ್ ಫೊಲ್ ಅನ್ನು ಜನರ ಮೋಜಿಗಾಗಿ ನೀಡಿ ವಿವಾದಕ್ಕೆ ಒಳಗಾಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಬಸ್ತಿಕೋಡಿಯಲ್ಲಿ ಈ ಸ್ವಿಮಿಂಗ್ ಫೂಲ್ ಇದೆ. ಇಲ್ಲಿ ಅಪಾಯಕಾರಿ ಸ್ವಂಟ್ ಮಾಡುತ್ತಾ, ಯುವಕರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಬಸ್ತಿಕೋಡಿ ನಿವಾಸಿ ಪ್ರಸ್ತುತ ಇಸ್ರೇಲ್‌ನಲ್ಲಿ ಉದ್ಯಮಿಯಾಗಿರುವ ಜಾನ್ ಹಣದಾಸೆಗೆ ಈಗ ಮನೆಯನ್ನೇ ರೆಸಾರ್ಟ್ ಮಾಡಿದ್ದಾರೆ. ಮನೆಯ ಸ್ವಿಮ್ಮಿಂಗ್ ಫೂಲ್ ಅನ್ನು ಸಾರ್ವಜನಿಕರಿಗೆ ಗಂಟೆಗೆ ನೂರು ರೂಪಾಯಿಗೆ ಕೊಡಲಾಗುತ್ತಿದೆ. ಹೀಗೆ ಉದ್ಯಮಿ ಜಾನ್ ಹಣದಾಸೆಗೆ ಯುವಕರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಾನಮತ್ತರಾಗಿ ಸ್ವಿಮ್ಮಿಂಗ್ ಫೂಲ್‌ಗೆ ಬರುವ ಯುವಕರು, ಗಂಟೆಗಳ ಕಾಲ ಸ್ಟಂಟ್ ಮಾಡುತ್ತಾ, ಅಪಾಯಕಾರಿಯಾಗಿ ಈಜಾಡುತ್ತಾ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ವಿಮ್ಮಿಂಗ್ ಫೂಲ್‌ನಲ್ಲಿ ಯಾವುದೇ ಸೆಕ್ಯೂರಿಟಿ, ಲೈಫ್ ಜಾಕೆಟ್ ಕೂಡ ಇಲ್ಲ. ಈ ಎಲ್ಲಾ ಪ್ರಕ್ರಿಯೆಗೆ ಪಂಚಾಯತ್‌ನಿಂದ ಅನುಮತಿಯನ್ನೂ ಪಡೆದಿಲ್ಲ. ಇದನ್ನೆಲ್ಲ ನೋಡುತ್ತಿರುವ ಸ್ಥಳಿಯ ಆಡಳಿತ ಏನು ಮಾಡುತ್ತಿದೆ ಎಂಬುದೆ ಆಶ್ಚರ್ಯದ ಸಂಗತಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
