ಗಂಜಿ ಗಿರಾಕಿಗಳಿಂದ ಖಂಡನೀಯ ಕೃತ್ಯ…!

ತುಮಕೂರು

     ನಗರ ಶಾಸಕರ ವಿರುದ್ದ ಪೇ ಎಂ.ಎಲ್.ಎ. ಎಂದು ಕಿಡಿಗೇಡಿಗಳು ರಾತ್ರೋ ರಾತ್ರಿ ಕಳ್ಳರಂತೆ ಬಾಡಿಗೆ ವ್ಯಕ್ತಿಗಳನ್ನು ಕರೆತಂದು ಭಿತ್ತಿ ಪತ್ರಗಳನ್ನು ಅಂಟಿಸಿ ತುಮಕೂರು ಜಿಲ್ಲೆಯ ರಾಜಕಾರಣವನ್ನು ಕಲುಷಿತಗೊಳಿಸಲು ಹರ ಸಾಹಸ ಪಡುತ್ತಿರುವುದು ಹಾಸ್ಯಾಸ್ಪದವಾಗಿದೆ.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇಡಿ ಕೃತ್ಯವನ್ನು ಮಾಡುವವರನ್ನು ತುಮಕೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಖಂಡಿಸುತ್ತದೆ. ತುಮಕೂರು ನಗರದಲ್ಲಿ ಇಂದೆಂದೂ ಕಾಣದಂತಹ ಅಭಿವೃದ್ದಿ ಕಾರ್ಯಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದಾಗಿದ್ದು, ಸನ್ಮಾನ್ಯ ಜನಪ್ರಿಯ ಶಾಸಕರು ಸಹ ಡಬಲ್ ಇಂಜಿನ್ ಸರ್ಕಾರದ ಅನುದಾನ ತಂದು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು ಇದು ಕೆಲವು ಚಿಲ್ಲರೆ ಗಂಜಿ ಗಿರಾಕಿಗಳಿಗೆ ನಿದ್ದೆಗೆಡೆಸಿದೆ. ಈ ರೀತಿಯಾಗಿ ಕರಪತ್ರಗಳನ್ನು ಹತಾಶರಾಗಿ ಮಧ್ಯ ರಾತ್ರಿ ಕಳ್ಳರಂತೆ ತುಮಕೂರಿನ ವಿವಿಧ ಕಡೆ ಅಂಟಿಸಿಕೊAಡು ಬಂದಿದ್ದಾರೆ.

    ತುಮಕೂರು ನಗರದ ಜನತೆಯು ಅತ್ಯಂತ ಪ್ರಬುದ್ದರಾಗಿದ್ದು, ಕಳೆದ 5 ವರ್ಷಗಳಲ್ಲಿ ತುಮಕೂರು ನಗರದಲ್ಲಾಗಿರುವ ಅಮೂಲಗ್ರವಾದ ಬದಲಾವಣೆಯನ್ನು ಅತ್ಯಂತ ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಶಾಸಕರ ಅಭಿವೃದ್ದಿ ಕಾರ್ಯದ ಬಗ್ಗೆ ಜನರಿಗೆ ಹೆಮ್ಮೆಯಿದೆ. ಹಾಗಾಗಿ ಬೆಳಗಿನ ಜಾವ ಈ ಕೃತ್ಯವನ್ನು ಕಂಡAತಹ ಅನೇಕ ನಾಗರೀಕರು ಸ್ವಯಂ ಪ್ರೇರಿತರಾಗಿ ಭಿತ್ತಿಪತ್ರಗಳನ್ನು ತೆರವುಗೊಳಿಸಿದ್ದಾರೆ.

    ಸನ್ಮಾನ್ಯ ಶಾಸಕರು ಜನರ ಮಧ್ಯೆ ಇದ್ದು, ತುಮಕೂರು ನಗರದ ಚಿತ್ರಣವನ್ನೆ ಬದಲಿಸಿದ್ದು ಇಂತಹ ಹೀನ ಕೃತ್ಯಗಳಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆಯೇ ಹೊರತು ಎಂದಿಗೂ ಕುಂದುವುದಿಲ್ಲ. ಶಾಸಕರ ಯಶಸ್ಸುನ್ನು ಸಹಿಸದ ರಾಜಕೀಯ ವೈರಿಗಳು ಹೊಟ್ಟೆ ಪಾಡಿಗಾಗಿ ರಾಜಕಾರಣ ಮಾಡುತ್ತಿರುವ ಗಂಜಿ ಗಿರಾಕಿಗಳ ಮುಖಾಂತರ ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದನ್ನು ತುಮಕೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಖಂಡಿಸುತ್ತದೆ.

   ಇಂತಹ ನೂರಾರು ಕೀಡಿಗೇಡಿಗಳು ಎಷ್ಟೇ ಕೆಸರು ಎರಚಿದರು ಆ ಕೆಸರಿನಲ್ಲಿಯೇ ಕಮಲ ಅರಳುವುದು, ಮತ್ತೆ ತುಮಕೂರಿನಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಟಿ.ವೈ. ಯಶಸ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link