ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು

0
41

ಶಿರಾ

      ಒಬ್ಬ ಶಿಕ್ಷಕನ ಮೇಲೆ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಮಹತ್ವದ ಜವಾಬ್ದಾರಿಯಿದ್ದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಬೋಧನೆಯನ್ನು ಶಿಕ್ಷಕರು ಕೈಗೊಳ್ಳಬೇಕು ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ ರವಿಶಂಕರರೆಡ್ಡಿ ತಿಳಿಸಿದರು.
ಶಿರಾ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಮಂಗಳವಾರದಂದು 9 ಮತ್ತು ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೈಗೊಳ್ಳಲಾಗಿದ್ದ ವಿಶ್ವಾಸ ಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಪ್ರತಿಯೊಬ್ಬ ಮಕ್ಕಳಲ್ಲೂ ಕಲಿಕೆಯ ಬಗ್ಗೆ ಆಸಕ್ತಿ ಇದ್ದು ಈ ಪೈಕಿ ಕೆಲ ಮಕ್ಕಳು ತಮ್ಮ ಬುದ್ದಿ ಚಿತ್ತದ ಗ್ರಹಿಕೆಯ ಕ್ಷಣಿಕೆಯಿಂದ ಕಲಿಕೆಯಲ್ಲಿ ಹಿಂದುಳಿಯಬಹುದಾಗಿದ್ದು, ಅಂತಹ ಮಕ್ಕಳನ್ನು ಕೂಡ ವಿಶ್ವಾಸ ಕಿರಣ ಕಾರ್ಯಕ್ರಮದ ಮೂಲಕ ಉಳಿದ ಮಕ್ಕಳ ಕಲಿಕೆಯ ಹಂತಕ್ಕೆ ಕರೆದೊಯ್ಯಬಹುದಾಗಿದೆ ಎಂದರು.

      ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಪೋಷಕರು, ಶಿಕ್ಷಕರು ಹಾಗೂ ಸಂಘ-ಸಂಸ್ಥೆಗಳು ಗುರ್ತಿಸುತ್ತಾ ಹೋದಲ್ಲಿ ಅಂತಹ ವಿದ್ಯಾರ್ಥಿಗಳು ಸಮಾಜಕ್ಕೆ, ದೇಶಕ್ಕೆ ಒಳ್ಳೆಯ ಹೆಸರು ತರಲು ಸಾದ್ಯವಿದೆ. ಮಕ್ಕಳು ತಮ್ಮ ಪಠ್ಯ ಕಲಿಕೆಯ ಜೊತೆಗೆ ಸಾಮಾಜಿಕ ಜ್ಞಾನದ ಪರಿಚಯವನ್ನೂ ಮಾಡಿಕೊಳ್ಳಬೇಕಿದ್ದು ಪಠ್ಯೇತರ ಚಟುವಟಿಕೆಗಳತ್ತವೂ ಗಮನಹರಿಸಬೇಕು ಎಂದು ರವಿಶಂಕರರೆಡ್ಡಿ ತಿಳಿಸಿದರು.

      ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯ್‍ಕುಮಾರ್ ಮಾತನಾಡಿ ವಿಶ್ವಾಸ ಕಿರಣ ಕಾರ್ಯಕ್ರಮದಲ್ಲಿ 9ನೇ ತರಗತಿಯ 100 ಮಂದಿ 10ನೇ ತರಗತಿಯ 100 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ದಸರಾ ಅವಧಿಯಲ್ಲಿ ಅ:17ರವರೆಗೂ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ಪಿ.ಕೆಂಚಪ್ಪ, ಉಪಾಧ್ಯಕ್ಷೆ ಯೋಗೇಶ್ವರಿ, ಶಿವಕುಮಾರ್ ಕೆ.ಟಿ, ಆರ್.ರಾಜಣ್ಣ, ಪಿ.ಮಂಜುಪ್ಪ, ಶ್ರೀಮತಿ ಪುಷ್ಪ, ಅನ್ನಪೂರ್ಣ, ಉಪ ಪ್ರಾಂಶುಪಾಲ ದೇಶಾನಾಯ್ಕ ಮುಂತಾದವರು ಹಾಜರಿದ್ದರು.

 

LEAVE A REPLY

Please enter your comment!
Please enter your name here