ನವದೆಹಲಿ :
ಬಕ್ರೀದ್ ಹಿನ್ನೆಲೆ ಮಾರಣ ಹೋಮಕ್ಕೆ ತಂದಿದ್ದ 100 ಕ್ಕೂ ಹೆಚ್ಚು ಮೇಕೆಗಳನ್ನು ಜೈನ ಸಮುದಾಯದ ಯುವಕರು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ನಡೆದಿರುವುದು ನವದೆಹಲಿಯಲ್ಲಿ. ಇಲ್ಲಿನ ಚಾಂದನಿ ಚೌಕ್ನಲ್ಲಿ ಬಕ್ರೀದ್ ಹಿನ್ನೆಲೆ ನೂರಾರು ಮೇಕೆಗಳನ್ನು ಇರಿಸಲಾಗಿತ್ತು.
ಹಬ್ಬದ ಸಲುವಾಗಿ ಇವುಗಳನ್ನು ಬಲಿಕೊಡಲು ಮುಂದಾಗಿತ್ತು. ಆದರೆ, ಈ ವಿಷಯ ತಿಳಿದ ಕೆಲವು ಜೈನ ಸಮುದಾಯದವರು ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿರುವ 100 ಕ್ಕೂ ಮೇಕೆಗಳನ್ನು ರಕ್ಷಿಸಿದ್ದಾರೆ. ಸುಮಾರು 11 ಲಕ್ಷ ರೂ.ಗಳಷ್ಟು ಸ್ವಂತ ಹಣ ನೀಡಿ ಮೇಕೆಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿತ್ತು. ಈದ್ ಮಿಲಾದ್ ಹಬ್ಬದ ಬಲಿದಾನಕ್ಕಾಗಿ ತಂದಿದ್ದ 250 ಕ್ಕೂ ಹೆಚ್ಚು ಮೇಕೆಗಳನ್ನು ರಕ್ಷಿಸಿದ್ದರು. ಮೀರತ್ ಜೈನ ಸಮುದಾಯದ ಸದಸ್ಯರು 2016 ರಲ್ಲಿ ಸ್ಥಾಪಿಸಿದ ಜೀವ್ ದಯಾ ಸಂಸ್ಥಾನವು ಇಂತಹ ಮಾನವೀಯ ಕಾರ್ಯ ಮಾಡುತ್ತ ಬಂದಿದ್ದೆ.
