ಲೈಂಗಿಕ ಅಪರಾಧ : ತಡೆಯುವ ನಿಟ್ಟಿನಲ್ಲಿ ಜಪಾನ್‌ ಮಹತ್ವದ ಹೆಜ್ಜೆ

ಟೋಕ್ಯೋ:

     ಲೈಂಗಿಕ ಅಪರಾಧಗಳ ಕಡಿವಾಣದ ಭಾಗವಾಗಿ ಜಪಾನ್‌ ಸರ್ಕಾರ ಮಹತ್ತರ ಹೆಜ್ಜೆಯನ್ನಿರಿಸಿದ್ದು, ಲೈಂಗಿಕ ಸಮ್ಮತಿಯ ವಯೋಮಿತಿಯನ್ನು 13 ರಿಂದ 16 ವರ್ಷಕ್ಕೆ ಏರಿಕೆ ಮಾಡಿದೆ. ಈ ಮೂಲಕ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.

    ಸರ್ಕಾರ ಪ್ರಸ್ತಾಪಿಸಿರುವ ಈ ನೀತಿಗೆ ಸಂಸತ್‌ನ ಮೇಲ್ಮನೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆತಿದೆ. ಇದರೊಂದಿಗೆ ಲೈಂಗಿಕ ಕ್ರಿಯೆಗೆ ಅತಿ ಸಣ್ಣವಯಸ್ಸಿಗೆ ಅನುಮತಿ ನೀಡಿದ್ದ ದೇಶವೆಂಬ ಅಪಖ್ಯಾತಿಯಿಂದಲೂ ಜಪಾನ್‌ ಮುಕ್ತವಾಗಲಿದೆ. ಸರ್ಕಾರದ ಈ ನಿರ್ಣಯವನ್ನು ಮಾನವ ಹಕ್ಕು ಸಂಘಟನೆಗಳು ಹಾಗೂ ಸಮಾಜ ಸುಧಾರಣಾ ಸಂಘ ಸಂಸ್ಥೆಗಳು ಸ್ವಾಗತಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap