ಜಪಾನಂದಜಿರವರಿಂದ ತಮಿಳುನಾಡಿನಲ್ಲಿ ಚಂಡಮಾರುತ ಸಂತ್ರಸ್ತರಿಗೆ ಪರಿಹಾರ

ಪಾವಗಡ  :

      ‘ನಿವಾರ್’ ಚಂಡಮಾರುತದ ಹೊಡೆತದಿಂದ ತತ್ತರಿಸಿದ ಜನತೆಗೆ ಅದರಲ್ಲಿಯೂ ಅತ್ಯಂತ ಹಿಂದುಳಿದ ಹಾಗೂ ರಸ್ತೆಗಳಿಲ್ಲದ ಪ್ರದೇಶಗಳಿಗೆ ಸ್ವಾಮಿ ಜಪಾನಂದಜಿ ಹಾಗೂ ಸ್ವಾಮಿ ವಿವೇಕಾನಂದ ತಂಡ ಪರಿಹಾರ ಕಾರ್ಯವನ್ನು ನಡೆಸಿತು. ಕಡಲೂರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಸ್ವಾಮೀಜಿ ಹಾಗೂ ಅವರ ತಂಡ ಸುರಿಯುವ ಮಳೆಯಲ್ಲಿಯು ಸಹ ತಮ್ಮ ಗುಡಿಸಿಲುಗಳನ್ನು ಕಳೆದುಕೊಂಡು ಪರಿತಪಿಸುತ್ತಿರುವ ಜನರಿಗೆ ಅವರವರ ಮನೆ ಬಾಗಿಲಿಗೆ ಹೋಗಿ ಪರಿಹಾರವನ್ನು ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯವನ್ನು ತರುವಂತಹ ಸಂಗತಿಯೇ ಸರಿ.

      ಕಡಲೂರಿನ ಜನತೆ ಅತ್ಯಾಶ್ಚರ್ಯದಿಂದ ಸ್ವಾಮಿ ವಿವೇಕಾನಂದರ ಸೈನಿಕರು ನಡೆಸುತ್ತಿರುವ ಪರಿಹಾರ ಕಾರ್ಯವನ್ನು ಸ್ವತಃ ಕಂಡು ಆಶ್ಚರ್ಯಚಕಿತರಾದರು. ದೋ ಎಂದು ಸುರಿಯುವ ಮಳೆಯ ಹಿನ್ನೆಲೆಯಲ್ಲಿ ಕುಂಡುಸಲೈ ಹಾಗೂ ಪಿ.ಎನ್.ಪಾಳ್ಯಂ, ಇರುಳೂರು ಕಾಲನಿ ಹಾಗೂ ಸಮುದ್ರ ತೀರದ ಕೊಂಗರಯನ್ನೂರ್‍ಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ.

      ಎರಡನೆ ಚಂಡಮಾರುತವಾದ ‘ಪುರವಿ’ ಈಗಾಗಲೇ ಅಪ್ಪಳಿಸುತ್ತಿದ್ದು, ಪರಿಹಾರ ಕಾರ್ಯ ತುಂಬಾ ಕ್ಲಿಷ್ಟವಾಗಿದೆ. ಆದರೂ ಸ್ವಾಮೀಜಿ ತಮ್ಮ ತಂಡದೊಂದಿಗೆ ಹಾಗೂ ಸ್ಥಳೀಯ ಅಧಿಕಾರಿಗಳಾದ ಮಹೇಶ್ ಹಾಗೂ ರಾಮಪ್ರಸಾದ್ ಸಹಕಾರದಿಂದ ಅತ್ಯಂತ ಹೀನ ಸ್ಥಿತಿಯಲ್ಲಿರುವ, ಚಂಡಮಾರುತದಿಂದ ತತ್ತರಿಸಿರುವ ಜನರಿಗೆ ಸಾಂತ್ವನ ನೀಡುವುದಲ್ಲದೆ, ಸೊಳ್ಳೆಪರದೆ, ಟಾರ್ಪಾಲಿನ್, ದಿನಸಿ ಹಾಗೂ ವಸ್ತ್ರಗಳನ್ನೊಳಗೊಂಡ ಪೊಟ್ಟಣಗಳನ್ನು ವಿತರಿಸಿದರು.

      ಸುಮಾರು 500 ಜನರಿಗೆ ಈ ಪರಿಹಾರ ಸಾಮಗ್ರಿಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವಾಮಿ ಜಪಾನಂದಜೀ ತಿಳಿಸಿದ್ದಾರೆ. ಒಟ್ಟಿನಲ್ಲಿ ತುಮಕೂರು ಜಿಲ್ಲೆಯ ಪಾವಗಡದ ಹೆಸರು ದೇಶದಾದ್ಯಂತ ಅದರಲ್ಲಿಯೂ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಜನರ ಮನದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ಹಾಗೂ ಪಾವಗಡದ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಅಜರಾಮರವಾಗಿ ಉಳಿಯುವಲ್ಲಿ ಸಂದೇಹವಿಲ್ಲ ಎನ್ನಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link