ಶಿವಮೊಗ್ಗ:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಂಗ-ಭದ್ರಾ ಸಂಗಮ ಕ್ಷೇತ್ರ ಚಿಕ್ಕಕೂಡಲಿ ಬಳಿ ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 30-40 ಸ್ಥಾನವನ್ನು ಈಗ ನಿಂತರೂ ಗೇಲ್ತೇವೆ.
ನಮಗೆ 123 ಸ್ಥಾನದ ಗುರಿ ತಲುಪಿ, ಸ್ವತಂತ್ರವಾಗಿ ಸರ್ಕಾರ ರಚನೆಯಾಗಬೇಕು. ಅದಕ್ಕಾಗಿ ನಿವೆಲ್ಲರೂ ನಮಗೆ ಬೆಂಬಲ ಕೊಟ್ಟು, ಸಹಕರಿಸಬೇಕು. ನಾವು ಕೊಟ್ಟ ಭರವಸೆಗಳನ್ನು 5 ವರ್ಷದಲ್ಲಿ ಈಡೇರಿಸುತ್ತೇನೆ. ಒಂದು ವೇಳೆ ನಾನು ಮಾತಿಗೆ ತಪ್ಪಿದರೇ ಮತ್ತೆ ನಿಮ್ಮ ಮುಂದೆ ಬಂದು ಮತ ಕೇಳಲ್ಲ. ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆಂದು ಹೇಳಿದರು.
ಜನತಾ ಜಲಧಾರೆಯ ಉದ್ದೇಶವೇ ರೈತರ ಬದುಕು ಹಸನಾಗಿಸುವುದು. ನಾಡಿನ ನದಿಗಳಲ್ಲಿ ಸಮೃದ್ಧವಾಗಿ ನೀರಿದ್ದು, ಅದು ರೈತನ ಹೊಲಗಳಿಗೆ ಹರಿಯಬೇಕು. ಇದಕ್ಕಾಗಿ ಜಲಾಶಯ, ಕಾಲುವೆ ನಿರ್ಮಾಣ ಅಗಬೇಕು.ಹಳೆ ಕಾಲುವೆ ಪುನಶ್ಚೇತನ ಅಗಬೇಕು. ಇದಕ್ಕಾಗಿ ಐದು ವರ್ಷದ ಸರ್ಕಾರವನ್ನು ಪಡೆಯಲು ನಿಮ್ಮ ಮುಂದೆ ಬಂದಿದ್ದೇನೆ. ಈ ಭಾಗದಲ್ಲಿ ಶಾರದಾ ಪರ‍್ಯಾನಾಯ್ಕ್ ಅವರನ್ನು ಬೆಂಬಲಿಸುವ ಮೂಲಕ ಶಕ್ತಿ ನೀಡಬೇಕು. ರಾಜ್ಯದ ನೀರಾವರಿ ಯೋಜನೆಗಳಿಗೆ ನಾಲ್ಕು ಲಕ್ಷ ಕೋಟಿ ಹಣ ಬೇಕಿದೆ.
ಈಗಿರುವ ಸರ್ಕಾರ ನೀರಾವರಿ ಯೋಜನೆಗೆ 8 ಸಾವಿರ ಕೋಟಿ ಖರ್ಚು ಮಾಡುತ್ತಾರೆ. ಅದರಲ್ಲೂ ಈಗ ನೀವೆಲ್ಲರೂ ನೋಡುತ್ತಿದ್ದೀರಿ. ಕಮಿಷನ್ ಹೇಗೆ ಪಡೆಯುತ್ತಾ ಇದ್ದಾರೆ ಎಂದು. ಕಮಿಷನ್ ವಿಚಾರವಾಗಿ ಇದೇ ಜಿಲ್ಲೆಯ ಈಶ್ವರಪ್ಪ ರಾಜೀನಾಮೆ ಕೂಡ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲೂ ಕಮಿಷನ್ ತೆಗೆದುಕೊಳ್ಳುತ್ತಾ ಇದ್ದರು. ಇದೀಗ ಬಿಜೆಪಿ ಸರ್ಕಾರ ಬಂದಮೇಲೆ ಅದು ಡಬ್ಬಲ್ ಅಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸದ್ಯಕ್ಕೆ ಮಾಸ್ಕ್ ಕಡ್ಡಾಯ ಇಲ್ಲ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ
ಸರಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಶೇ.65ರಷ್ಟು ಹಣವನ್ನು ಕಮಿಷನ್ ಎಂದು ಪೋಲು ಮಾಡಲಾಗಿದ್ದು, ಉಳಿದ ಹಣದಲ್ಲಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಈಗಾಗಲೇ ರಾಜ್ಯದ ಜನರಿಗಾಗಿ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ಸ್ವಾವಲಂಬಿ ಜೀವನಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲಾಗಿದೆ. ‘ಜನತಾ ಜಲಧಾರೆ’ ಯಾತ್ರೆಯು ಹದಿನೈದು ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ನಂತರ ನಮ್ಮ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ `ಹಲಾಲ್ ಉತ್ಪನ್ನ’ ನಿಷೇಧ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ
‘ನೀವು ಜೆಡಿಎಸ್‌ಗೆ ಪೂರ್ಣ ಬಹುಮತವನ್ನು ನೀಡಿದರೆ, ರಾಜ್ಯದಾದ್ಯಂತ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳು ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣವನ್ನು ಒದಗಿಸಲಾಗುತ್ತದೆ. ಕೋವಿಡ್ -19 ಸಮಯದಲ್ಲಿ ಆಸ್ಪತ್ರೆಗಳು ಕೆಟ್ಟ ಸ್ಥಿತಿಯಲ್ಲಿದ್ದವು. ನಾವು ಅಧಿಕಾರಕ್ಕೆ ಬಂದರೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ 30 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗುವುದು. ಪ್ರತಿ ಕುಟುಂಬಕ್ಕೂ ಉದ್ಯೋಗ ನೀಡಲಾಗುವುದು. ಗ್ರಾಮದ ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸಹಾಯ ಮಾಡಲಾಗುವುದು. ಪ್ರತಿ ಕುಟುಂಬಕ್ಕೂ ಸ್ವಂತ ಮನೆ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ