ತುಮಕೂರು : ತೆರಿಗೆ ಪಾವತಿಸಲು ಆಸ್ತಿ ಮಾಲೀಕರಿಗೆ ಸೂಚನೆ

 ತುಮಕೂರು : 

     ಮಹಾನಗರ ಪಾಲಿಕೆಗೆ ಹಲವಾರು ವರ್ಷಗಳಿಂದ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ, ನೀರು ಸರಬರಾಜು, ಒಳಚರಂಡಿ ಶುಲ್ಕ ಮತ್ತು ಅಂಗಡಿ ಮಳಿಗೆಯ ಬಾಡಿಗೆ ಮೊತ್ತವನ್ನು ಕೂಡಲೇ ಪಾವತಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ಆಸ್ತಿ ಮಾಲೀಕರು, ಅಂಗಡಿ ಮಳಿಗೆಗಳ ಬಾಡಿಗೆದಾರರಿಗೆ ಸೂಚಿಸಿದ್ದಾರೆ.

      ಆಸ್ತಿ ತೆರಿಗೆ ಹಾಗೂ ಬಾಡಿಗೆ ಮೊತ್ತ, ನೀರು, ಒಳಚರಂಡಿ ಶುಲ್ಕ ಪಾವತಿಸುವಂತೆ ಹಲವಾರು ಬಾರಿ ತಿಳುವಳಿಕೆ ನೀಡಿದ್ದರೂ ಸಹ ತೆರಿಗೆ ಪಾವತಿಸಿರುವುದಿಲ್ಲ. ಈ ಕೂಡಲೇ ಚಾಲ್ತಿ ಸಾಲಿನವರೆಗೆ ತೆರಿಗೆ ಶುಲ್ಕ ಹಾಗೂ ಬಾಡಿಗೆ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಸೆಕ್ಷನ್ 113 ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ತಿದ್ದುಪಡಿ ಆಂದೋಲನ:

ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ದಾಖಲಾತಿಗಳಲ್ಲಿ ನ್ಯೂನತೆಗಳು ಇರುವುದಾಗಿ ಆಸ್ತಿ ಮಾಲೀಕರು ತಿದ್ದುಪಡಿ ಕೋರಿ ಮನವಿ ಸಲ್ಲಿಸಿರುವುದರಿಂದ 2021ರ ಆಗಸ್ಟ್ ಹಾಗೂ ಸೆಪ್ಟಂಬರ್ ಮಾಹೆಯಲ್ಲಿ ಆಸ್ತಿ ದಾಖಲಾತಿಗಳ ತಿದ್ದುಪಡಿ ಆಂದೋಲನವನ್ನು ಹಮ್ಮಿಕೊಂಡಿದೆ. ಈ ಆಂದೋಲನದಲ್ಲಿ ಆಸ್ತಿ ಮಾಲೀಕರು ತಮ್ಮ ದಾಖಲಾತಿಗಳನ್ನು ಪಾಲಿಕೆಗೆ ಸಲ್ಲಿಸಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap