ಜೀವನ್ಮರಣ ಹೋರಾಟ ನಡೆಸಿದರೂ ಬದುಕುಳಿಯಲಿಲ್ಲ ಖ್ಯಾತ ಗಾಯಕ

ಮೊಹಾಲಿ:

     ರಸ್ತೆ ಅಪಘಾತದಲ್ಲಿ  ಗಂಭೀರವಾಗಿ ಗಾಯಗೊಂಡಿದ್ದ ಪಂಜಾಬ್‌ನ ಖ್ಯಾತ ಗಾಯಕ, ನಟ ರಾಜ್‌ವೀರ್ ಜವಾಂಡ  ಇಹಲೋಕ ತ್ಯಜಿಸಿದ್ದಾರೆ. ಅಪಘಾತದಲ್ಲಿ ರಾಜ್‌ವೀರ್‌ನ ತಲೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಅವರ ಆರೋಗ್ಯ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಅಗಲಿದ್ದಾರೆ. ತಮ್ಮ ಮಧುರ ಕಂಠ ಹಾಗೂ ಜನಪ್ರಿಯ ಗೀತೆಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಗಾಯಕ ರಾಜ್‌ವೀರ್ ಜವಾಂಡಾ ಗಾಯನ ನಿಲ್ಲಿಸಿದ್ದಾರೆ.

   ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದಾಗ ಅಪಘಾತ ಸಂಭವಿಸಿತ್ತು. ಬಡ್ಡಿ ಸಮೀಪ ನಡೆದ ಅವಘಡದಲ್ಲಿ ಗಂಭೀರವಾಗಿ ರಾಜ್‌ವೀರ್ ಗಾಯಗೊಂಡಿದ್ದರು. ವೇಗವಾಗಿ ಸಾಗುತ್ತಿರುವಾಗ ರಸ್ತೆಯಲ್ಲಿ ಏಕಾಏಕಿ ದನ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಅವರ ತಲೆಗೆ ತೀವ್ರ ಗಾಯಗಳಾಗಿತ್ತು. ಅಪಘಾತದ ಬೆನ್ನಲ್ಲೇ ಗಂಬೀರವಾಗಿ ಗಾಯಗೊಂಡ ರಾಜ್‌ವೀರ್‌ನ ತಕ್ಷಣ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

   ತಲೆಗೆ ಹಾಗೂ ಬೆನ್ನು ಮೂಳೆಗೆ ಗಂಭೀರ ಗಾಯ ಆಗಿದ್ದ ಕಾರಣ ಚಿಕಿತ್ಸೆ ವೇಳೆ ರಾಜ್‌ವೀರ್‌ಗೆ ಹೃದಯಾಘಾತ ಸಂಭವಿಸಿತ್ತು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುತ್ತಿದಂತೆ ಸಿವಿಲ್ ಆಸ್ಪತ್ರೆಯಿಂದ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ರಾಜ್‌ವೀರ್‌ ಜವಾಂಡ ಆರೋಗ್ಯ ಪರಿಸ್ಥಿತಿ ಹದೆಗೆಟ್ಟಿದ ಕಾರಣ ಫೋರ್ಟಿಸ್ ಆಸ್ಪತ್ರೆಯ ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ನೆರವು ನೀಡಲಾಗಿತ್ತು. ವೈದ್ಯರು ರಾಜ್‌ವೀರ್‌ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. 

   ಆದ್ರೆ ದುರಾದೃಷ್ಟವಶಾತ್ ಹನ್ನೊಂದು ದಿನಗಳ ಕಾಲ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ರಾಜ್‌ವೀರ್‌ ಇಂದು ನಿಧನರಾಗಿದ್ದು, ಸಂಗೀತ ಲೋಕದಲ್ಲಿ ತಾರೆಯಾಗಿ ಮಿಂಚಿ, ಕೇವಲ 35 ವರ್ಷಕ್ಕೆ ತಮ್ಮ ಪಯಣ ನಿಲ್ಲಿಸಿದ್ದಾರೆ. ಕಳೆದ ಒಂದು ದಶಕದಿಂದ ಪಂಜಾಬಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಜವಾಂಡಾ, ಹೃದಯಕ್ಕೆ ಹತ್ತಿರವಾಗುವ ಸಾಕಷ್ಟು ಜನಪ್ರಿಯ ಹಾಡುಗಳನ್ನು ನೀಡಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕೆಲ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ರಾಜ್‌ವೀರ್‌, ತಮ್ಮ ಪತ್ನಿಯನ್ನು ಅಗಲಿದ್ದು, ಅಪಘಾತಕ್ಕೂ ಮುನ್ನದ ದಿನ ರಾಜ್‌ವೀರ್‌ ತಮ್ಮ ಹೊಸ ಆಲ್ಬಮ್ ಸಾಂಗ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು.

   ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದ ರಾಜ್‌ವೀರ್‌ ಇನ್‌ಸ್ಟಾಗ್ರಾಂನಲ್ಲಿ 2.4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದರು. ಯೂಟ್ಯೂಬ್ ಚಾನೆಲ್‌ನಲ್ಲಿ 9.3 ಲಕ್ಷಕ್ಕೂ ಅಧಿಕ ಸಬ್‌‌ಸ್ಕ್ರೈಬರ್‌ಗಳು ಇದ್ದರು. ರಾಜ್‌ವೀರ್‌ ತಮ್ಮ ವೃತ್ತಿ ಬದುಕಿನ ಪ್ರತಿಯೊಂದು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು, ಪ್ರವಾಸದ ಹವ್ಯಾಸವನ್ನು ಹೊಂದಿದ್ದ ಅವರು ಯಾವುದೇ ಸ್ಥಳಕ್ಕೆ ಹೋಗಿಬಂದರು ಆ ಜಾಗದ ಅತ್ಯದ್ಬುತ ಫೋಟೋಗಾಫಿಗಳನ್ನು ಪೋಸ್ಟ್ ಮಾಡುತ್ತಿದ್ದರು. ಯಾವುದೇ ಹೊಸ ಹಾಡುಗಳ ಟೀಸರ್‌ಗಳು ಬಿಡುಗಡೆಯಾದರೂ ತಮ್ಮ ಆಪ್ಡೇಟ್ ಮಾಡುತ್ತಿದ್ದರು. ‘ಜೋರ್’, ‘ಸೋಹ್ನಿ’, ‘ರಬ್ಬ್ ಕರ್ಕೆ’, ‘ತು ದಿಸ್ದಾ ಪೈಂದಾ’, ‘ಮೋರ್ನಿ’, ‘ಧೀಯಾನ್’, ‘ಖುಷ್ ರೆಹಾ ಕರ್’, ‘ಜೋಗಿಯಾ’ ಮೊದಲಾದವು ಅವರ ಜನಪ್ರಿಯ ಗೀತೆಗಳಾಗಿದ್ದು, ಇಂದಿಗೂ ಸಹಸ್ರಾರು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.

Recent Articles

spot_img

Related Stories

Share via
Copy link