ಪತ್ರಕರ್ತ ನಂಜುಂಡಪ್ಪ ಸೇರಿ 66 ಪ್ರಶಸ್ತಿ

ಬೆಂಗಳೂರು:       ಪತ್ರಕರ್ತ ನಂಜುಂಡಪ್ಪ ಸೇರಿ 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ  

ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಕರ್ನಾಟಕದಿಂದ ವಿವಿಧ ವಲಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜಕಾರಣದ ಪಿತಾಮಹ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದೇಹಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ, ದಿ. ಡಾ.ಡಿ.ಕೆ.ಆದಿಕೇಶವಲು, ಡಾ. ಸಿ.ಎನ್. ಮಂಜುನಾಥ್ ಸೇರಿ ಹತ್ತು ಮಂದಿಗೆ ಕರ್ನಾಟಕ ರತ್ನ, ನಟರಾದ ರವಿಚಂದ್ರನ್, ರಮೇಶ್ ಅರವಿಂದ್ ಹಾಗೂ ಪ್ರಜಾಪ್ರಗತಿ ಬೆಂಗಳೂರು ವರದಿಗಾರರಾದ ನಂಜುಂಡಪ್ಪ ಸೇರಿ 66 ಮಂದಿಗೆ 2021ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣ- ಬಿಎಂಸಿ ಸಭಾಂಗಣದಲ್ಲಿ ಡಿಸೆಂಬರ್ 26 ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ ತಿಳಿಸಿದ್ದಾರೆ.

ಡಾ ಆದಿಕೇಶವಲು, ಚಲನಚಿತ್ರ ನಿರ್ಮಾಪಕ ದಿವಂಗತ ವೀರಸ್ವಾಮಿ, ದಯಾನಂದ್ ಸಾಗರ್ ಸಂಸ್ಥೆಯ ಆರ್. ದಯಾನಂದ್ ಸಾಗರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ