ಕೊರಟಗೆರೆ :
ಗ್ರಾಪಂ ಚುನಾವಣೆಯಲ್ಲಿ ಮತದಾರನ ಓಲೈಕೆಗಾಗಿ ಮದ್ಯ ಹಂಚುವ ಉದ್ದೇಶದಿಂದ ಪರವಾನಗಿ ಇಲ್ಲದೆ ಸರಬರಾಜು ಮಾಡುತ್ತಿದ್ದ ಅಕ್ರಮ ಮಧ್ಯವನ್ನು ಬುಧವಾರ ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಜಪ್ತಿ ಮಾಡಿದೆ.
ಕೊರಟಗೆರೆ ತಾಲ್ಲೂಕಿನ ಮಾವತ್ತೂರು, ವಡ್ಡಗೆರೆ, ಬೈಚಾಪುರ ಮತ್ತು ಇತರೆ ಐದು ಕಡೆಗಳಲ್ಲಿ ದಿಡೀರ್ ದಾಳಿ ನಡೆಸಿ 4 ಪ್ರಕರಣ ದಾಖಲಿಸಿಕೊಂಡು, 26.370 ಲೀಟರ್ ಮದ್ಯವನ್ನು ಹಾಗೂ 2 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದು ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಗ್ರಾಪಂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಕಾರ್ಯಪ್ರವೃತ್ತರಾಗಿರುವ ಕೊರಟಗೆರೆ ಅಬಕಾರಿ ಪೊಲೀಸರ ತಂಡ ವಿವಿಧ ಕಡೆಗಳಲ್ಲಿ ಈಗಾಗಲೆ ಕಾರ್ಯಾಚರಣೆ ನಡೆಸಿದೆ. ದಾಳಿಯಲ್ಲಿ ಅಬಕಾರಿ ಸಿಬ್ಬಂದಿಯಾದ ರಂಗಧಾಮಯ್ಯ, ಹಮೀದ್, ಮಲ್ಲಿಕಾರ್ಜುನ್, ಮಂಜುಳಾ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
