ಅಯೋಧ್ಯೆ ರಾಮ ಮೋದಿ ರಾಮ ನಮ್ಮ ರಾಮ ಗಾಂಧಿ ರಾಮ : ಕೆ ಎನ್‌ ಆರ್

ಮಧುಗಿರಿ :

    ಅಯೋಧ್ಯೆ ರಾಮ ಮೋದಿ ರಾಮ ನಮ್ಮ ರಾಮ ಗಾಂಧಿ ರಾಮ ಎಂದು ಸಹಕಾರಿ ಸಚಿವ ಹಾಗೂ ಹಾಸನ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ತಿಳಿಸಿದರು.

    ಅವರು ತಾಲೂಕಿನ ದೊಡ್ಡೇರಿ ಹೋಬಳಿಯ ಗಡಿ ಗ್ರಾಮವಾದ ಕಿತ್ತಗಳಿಯ ಗ್ರಾಮದಲ್ಲಿನ ಶ್ರೀರಾಮನ ದೇವಾಲಯದಲ್ಲಿ ಕುಟುಂಬ ವರ್ಗದವರೊಂದಿಗೆ ವಿಶೇಷ ಪೂಜೆ ಹಾಗೂ ಪೂರ್ಣ ಆಹುತಿ ಯಜ್ಞ ಹಾಗೂ ಮಹಾಮಂಗಳಾರತಿಯ ಸೇವೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ನನ್ನ ಪತ್ನಿಯ ತಂದೆಯವರು ಬಹಳ ವರ್ಷಗಳಿಂದ ಇಲ್ಲಿನ ರಾಮನಿಗೆ ನಡೆದು ಕೊಳ್ಳುತ್ತಿದ್ದಾರೆ.ಈ ದೇವಾಲಯ ವನ್ನು ನಾನು 2004 -2005ರಲ್ಲಿ 30 ಲಕ್ಷ ರೂ ಖರ್ಚು ಮಾಡಿ ದೇವಾಲಯ ಕಟ್ಟಿಸಿದ್ದೆನೆ.

    ನಾನು ಆಸ್ತಿಕನೆ ನಾಸ್ತಿಕನಲ್ಲ‌, ನಾನು ರಾಮನ ಪೂಜೆ ಮಾಡಬಹುದು ಇನ್ನೊಬ್ಬನನ್ನ ಪೂಜೆ ಮಾಡುವ ವಿಚಾರ ಬೇರೆಯಾಗಿದೆ.

    ಇಂದಿನ ಲೆಕ್ಕಚಾರದಲ್ಲಿ ಕೋಟಿಗಟ್ಟಲೆ ಬೆಲೆ ಹೇಳಿಕೊಳ್ಳಬಹುದು.ನಮಗೆ ರಾಮನ ಮೇಲೆ ಭಕ್ತಿ ಇಲ್ಲ, ನಾವು ರಾಮನ ವಿರೋಧಿಗಳು ಅಂತ ಹೇಳುವಂಥಾದ್ದು ಸರಿಯಲ್ಲ.ಶಂಕರಾಚಾರ್ಯ ಗುರುಗಳು ಏನೇನು ಹೇಳಿದ್ದಾರೆ ಅದಕ್ಕೆ ನನ್ನ ಸಹಮತವಿದೆ. ಅದರಲ್ಲಿ ಎರಡನೇ ಮಾತಿಲ್ಲ.

    ಯಾರೆಲ್ಲಾ ಬಾಬ್ರಿ ಮಸೀದಿಯ ಜಾಗಕ್ಕಾಗಿ ಹೋರಾಟ ಮಾಡಿದ್ದರು ಅವರೆಲ್ಲಾ ಇಂದಿನ ಅಯೋಧ್ಯ ರಾಮನ ಪ್ರಾಣ ಪ್ರತಿಷ್ಟಾಪನೆಯ ಬಗ್ಗೆ ವಿಶ್ವಹಿಂದೂ ಪರಿಷತ್ ನವರೂ ವಿರೋಧ ಮಾಡಿದ್ದಾರೆ..
ನಾನು ಕೂಡ ಅದನ್ನೇ ಹೇಳ್ತಿದ್ದೀನಿ.

    ಶಂಕರಾಚಾರ್ಯರಿಗೆ ಆಧ್ಯಾತ್ಮಿಕದ ಬಗ್ಗೆ ತಿಳುವಳಿಕೆ ಇಲ್ಲ ಅಂತ ಹೇಳೋಕಾಗುತ್ತಾ.. ಅಥವ ವಿಶ್ವ ಹಿಂದೂ ಪರಿಷತ್ತಿನ ಮಂಗಳೂರಿನ ಶರ್ಮ, ಅವರೇ ಸುಪ್ರೀ ಕೋರ್ಟ್ ನಲ್ಲಿ ಪ್ರಕರಣ ದಾಖಸಿದ್ದವರಿಗೂ ಒಂದೇ ಒಂದು ಆಹ್ವಾನ ಪತ್ರವಿಲ್ಲ‌.

    ಅಷ್ಟರಲ್ಲೇ ತರಾತುರಿಯಲ್ಲಿ ಇದೆಲ್ಲಾದ್ದನ್ನೂ ಕೂಡ ನಾವು ಯೋಚನೆ ಮಾಡಬೇಕಾಗುತ್ತದೆ‌.
ರಾಜಕೀಯ ರಾಮನ ಮಾಡೋಕೆ ಹೊರಟಿದ್ದಾರೆ, ನಿಜವಾದ ದಶರಥನ ಮಗ ರಾಮನನ್ನ ಮಾಡ್ಬೇಕು..
ಮೋದಿ ರಾಮನ ಮಾಡೋದಲ್ಲ.

    ಹಿಂದಿನದ್ದಲ್ಲ ಗೊತ್ತ. ದ್ವೈತಾ , ಅದ್ವೈತಾ, ವಿಶಿಷ್ಟಾದ್ವೈತಾ ಗೊತ್ತಾ ಅದನ್ನೇ ನಾನು ಹೇಳಿದ್ದನೆ.
ಮೂಲಕ್ಕೆ ನಾನು ಹೋಗಲ್ಲ..ಮಹಾತ್ಮ ಗಾಂಧಿಯವರಿಗೆ ಗೋಡ್ಸೆ ಗುಂಡು ಹೊಡೆದಾಗ ಅವರು ಹೆರಾಮ್ ಅಂತ ಹೇಳಿದ್ರು.ಮತ್ತೇನನ್ನೂ ಹೇಳಲಿಲ್ಲ.ಮಹಾತ್ಮಗಾಂಧಿ ಪೂಜಿಸುತ್ತಿದ್ದ ರಾಮ ಏನಿದ್ದಾನೆ ಅವನ ಭಕ್ತ ನಾನು.

    ಗೂಡ್ಸೆಯ ದೇವಸ್ಥಾನ ಕಟ್ಟಿ ಅವನನ್ನ ಪೂಜಿಸುತ್ತಾರೆ ಇವರೆಲ್ಲಾ ಗೂಡ್ಸೆ ಹಿಂದೂಗಳು..
ದಶರಥ ರಾಮ ನಮ್ಮ ರಾಮ, ಗಾಂಧಿ ಹೇಳಿದ ರಾಮ ನಮ್ಮ ರಾಮ.ದೇವಸ್ಥಾನ ಕಟ್ಟಿಸೋದು ಅವರವರ ಭಕ್ತಿಗನುಸಾರವಾಗಿ ಕಟ್ಟುವಂಥಾದ್ದಾಗಿದೆ.

    1948ರಲ್ಲಿ ದೇವಾಲಯಕ್ಕೆ ಬೀಗ ಹಾಕಲಾಗಿತ್ತು ಮತ್ತೆ 1980 ರಲ್ಲಿ ರಾಜೀವ್ ಗಾಂಧಿ ಬೀಗ ತೆಗೆಸಿಕೊಟ್ಟರು.ರಾಮ ಸರ್ವಂತರ್ಯಾಮಿ ಸರ್ವವ್ಯಾಪಿಯಾಗಿದ್ದು ಎಲ್ಲರಿಗೂ ಬೇಕಿರುವನು ಎಂದರು. ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಲಾಡು ಪ್ರಸಾದಗಳನ್ನು ವಿತರಿಸಲಾಯಿತು.

   ವಿಶೇಷ ಪೂಜೆಯ ಕಾರ್ಯಕ್ರಮದಲ್ಲಿ ಧರ್ಮಪತ್ನಿ ಶಾಂತಲಾ ರಾಜಣ್ಣ , ಪುತ್ರಿ ರಶ್ಮಿ , ಪುತ್ರರಾದ ರಾಜೇಂದ್ರ , ರವೀಂದ್ರ , ಬಲರಾಮ್, ಚಂದ್ರಶೇಖರ್ ಸೇರಿದಂತೆ ಸಾವಿರಾರು ಭಕ್ತರು ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap