ಹಾಲು ಹಾಕುವವರನ್ನು ಗುರುತಿಸಿ ಸದಸ್ಯತ್ವ ನೀಡಬೇಕು : ಕೆ ಎನ್‌ ರಾಜಣ್ಣ

ಮಧುಗಿರಿ :

    ರಾಜ್ಯದಲ್ಲಿ 65000 ಸಾವಿರ ಹಾಲು ಉತ್ಪಾದಕರು ಸಂಘಗಳಲ್ಲಿ ಸದಸ್ಯತ್ವ ಪಡೆಯದ ಸದಸ್ಯರಿದ್ದು ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ತಿಳಿಸಿದರು.

    ಅವರು ಪಟ್ಟಣದ ತಾ.ಪಂ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ 3 ಮತ್ತು 4ನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತನಾಡಿದರು.

    ತಾಲೂಕಿನಲ್ಲಿ 1802 ಜನ ಹಾಲು ಉತ್ಪಾದಕರು ಸಂಘಗಳಿಗೆ ಹಾಲು ಹಾಕುತ್ತಿದ್ದರು ಸಹ ಸದಸ್ಯತ್ವ ನೀಡಿಲ್ಲಾ. ಇವರಿಗೆ ಸಬ್ಸಿಡಿ ಶೇ. 5 ರಷ್ಟು ಪ್ರೋತ್ಸಾಹ ಹಣವು ದೊರೆಯುವುದಿಲ್ಲ , ಯಶಸ್ವಿ ಯೋಜನೆಯಡಿಗೂ ಆರ್ಹರಾಗುವುದಿಲ್ಲಾ ,

    ಕೆಲ ರಾಜಕೀಯ ಉದ್ದೇಶಗಳಿಂದ ಸಹ ಅವರಿಗೆ ಸದಸ್ಯತ್ವ ನೀಡುತ್ತೀಲ್ಲಾ. ಸಂಘಗಳಿಗೆ ಹಾಲು ಹಾಕುವವರನ್ನು ಗುರುತಿಸಿ ಸದಸ್ಯತ್ವ ನೀಡಬೇಕು.ಹಾಲು ಉತ್ಪಾದಕ ಸಂಘಗಳಲ್ಲಿ ಕೆಲವರು ಷೇರು ಹಣವನ್ನು ಪಾವತಿಸುತ್ತಿಲ್ಲಾ ಅಂತಹವರ ಪಟ್ಟಿ ಯನ್ನು ಹಾಲು ಒಕ್ಕೂಟದವರು ನೀಡಬೇಕು.

    ಸಹಕಾರ ಇಲಾಖೆಯ ವತಿಯಿಂದ ಷೇರು ಹಣವನ್ನು ಪಾವತಿ ಮಾಡಲು ಅವಕಾಶ ವಿದ್ದೂ ಈ ಬಗ್ಗೆ ಕ್ರಮ ಕೈಗೊಂಡು ಹಾಲು ಉತ್ಪಾದಕ ಸಂಘಗಳಲ್ಲಿ ಹಾಲು ಉತ್ಪಾದಕ ಹೆಸರುಗಳನ್ನು ನೊಂದಾಯಿಸುವಂತೆ ಮಾಡಿ ಎಂದು ಕೆ ಎಂ ಎಫ್ ವ್ಯಪಸ್ಥಾಪಕರಿಗೆ ಸೂಚಿಸಿದರು.

   ಹಾಲು ಉತ್ಪಾದಕ ಸಂಘಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಸುಮಾರು 10 ಕೋಟಿಗೂ ಅಧಿಕ ಸದಸ್ಯರು ಒಳಪಡಲಿದ್ದಾರೆ.

   ಕಂಪ್ಯೂಟರ್ ಆಳವಡಿಕೆ ಹಾಗೂ ಅನಾಲೈಜರ್ ಗಳನ್ನು ಹಾಲು ಉತ್ಪಾದಕ ಸಂಘಗಳಲ್ಲಿ ಆಳವಡಿಸುವುದರಿಂದ ನೇರವಾಗಿ ಹಣವು ರೈತರ ಖಾತೆಗಳಿಗೆ ಜಮೆ ಆಗುತ್ತದೆ ರೈತರ ಮೊಬೈಲ್ ಗಳಿಗೆ ಮಾಹಿತಿಯು ಹೋಗಲಿದೆ ಜತೆಯಲ್ಲಿ ಹಾಲಿನ ಫ್ಯಾಟ್ ಪ್ರಮಾಣವು ಪತ್ತೆಯಾಗುವುದರಿಂದ ಆ ಮೊತ್ತದ ಹಣವು ರೈತರಿಗೆ ದ್ವಿಗುಣ ವಾಗಲಿದ್ದು ಇದರಲ್ಲಿ ಯಾವುದೇ ಲೋಪ ದೋಷಗಳು ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಅದಷ್ಟೂ ಬೇಗಾ ಎಲ್ಲಾ ಹಾಲು ಉತ್ಪಾದಕರ ಸಂಘಗಳಲ್ಲಿ ಕಂಪ್ಯೂಟರ್ ಆಳವಡಿಕೆ ಮಾಡಬೇಕೆಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap