
ಪ್ರೊ ಕಬಡ್ಡಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ದಿನ ಮೂರು ಪಂದ್ಯಗಳನ್ನು ಆಯೋಜಿಸಿದ್ದು ಕಬಡ್ಡಿ ಪ್ರೇಮಿಗಳ ಕುತೂಹಲ ಹೆಚ್ಚಿಸಿತು. ಈ ಹಿಂದಿನ ಆವೃತ್ತಿಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಂಠೀರವಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿತ್ತಾದರೂ ಇದೇ ಮೊದಲ ವೈಟ್ಫೀಲ್ಡ್ನ ಪ್ರತಿಷ್ಠಿತ ಶಾರ್ಟನ್ ಹೊಟೇಲ್ನಲ್ಲಿ ಕಬ್ಬಡಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿದೆ.
ಅದರಂತೆ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಅಭಿಷೇಕ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಯು ಮುಂಬಾ ತಂಡವು ಜಯಭೇರಿ ಬಾರಿಸಿತು. ಬೆಂಗಳೂರು ಬುಲ್ಸ್ ಸೋಲಿನ ಕಹಿಯುಂಡಿತು.
ಯು ಮುಂಬಾಗೆ ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್ ಕೊನೆಯ ಹಂತದಲ್ಲಿ ಸ್ಟ್ಯಾಟರ್ಜಿ ಸರಿಯಿಲ್ಲದೇ ಸೋತಿದೆ. ಪವನ್ಕುಮಾರ್ ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್ ನಲ್ಲಿ ಅವರ ಆಟ ನಡೆಯಲಿಲ್ಲ.
ಕೇವಲ ಪಂದ್ಯ ಮುಗಿಯಲು ಕೇವಲ 5 ನಿಮಿಷ ಇರುವಾಗ ಬೆಂಗಳೂರು ಬುಲ್ಸ್ ತಂಡ ಯು ಮುಂಬಾಗೆ ಹೆಚ್ಚು ಪಾಯಿಂಟ್ಸ್ ನೀಡಿತು. ಹೀಗಾಗಿ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡ ಎಡವಿತು. ಬೆಂಗಳೂರು ಬುಲ್ಸ್ 30 ಅಂಕ ಗಳಿಸಿದ್ರೆ, ಯು ಮುಂಬಾ 46 ಅಂಕಗಳಿಸಿ ಗೆದ್ದು ಬೀಗಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








