ಟ್ರಂಪ್‌ ಕದನ ವಿರಾಮ ವಿಫಲ; ಇರಾನ್‌ನಿಂದ ಮತ್ತೆ ದಾಳಿ

ಟೆಲ್‌ ಅವೀವ್‌: 

    ಸತತ 12 ದಿನ ನಡೆದಿದ್ದ ಇಸ್ರೇಲ್‌ ಇರಾನ್‌ ನಡುವಿನ ಯುದ್ಧದಲ್ಲಿ ಕದನ ವಿರಾಮ ಜಾರಿಯಾಗಿದೆ. ಮಂಗಳವಾರ ಬೆಳಿಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಹೇಳಿಕೆ ಬಳಿಕವೂ ಇರಾನ್ ನಿರಂತರ ಕ್ಷಿಪಣಿ ದಾಳಿ ನಡೆಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಸುಮಾರು ಎರಡು ವಾರಗಳ ಮಿಲಿಟರಿ ಯುದ್ಧದ ನಂತರ, ಇಸ್ರೇಲ್ ಮತ್ತು ಇರಾನ್‌ ನಡುವೆ ಕದನ ವಿರಾಮವನ್ನು ಏರ್ಪಡಿಸಿದ್ದೇನೆ ಎಂದು ಟ್ರಂಪ್‌ ಹೇಳಿದ್ದರು. ಮೊದಲು ಇರಾನ್‌ ಟ್ರಂಪ್‌ ಹೇಳಿಕೆಯನ್ನು ತಿಸ್ಕರಿಸಿತ್ತು. ನಂತರ ಇರಾನ್‌ ಸಮ್ಮತಿ ಸೂಚಿಸಿತ್ತು.

    ಕದನ ವಿರಾಮ ಏರ್ಪಟ್ಟ ಕೆಲವೇ ಗಂಟೆಗಳ ನಂತರ ಇಸ್ರೇಲ್‌ನಲ್ಲಿ ಸೈರನ್‌ ಮೊಳಗಿದೆ. ಇಸ್ರೇಲಿ ರಕ್ಷಣಾ ಪಡೆಗಳು (IDF) ತನ್ನ ನಾಗರಿಕರನ್ನು ಸುರಕ್ಷಿತ ಬಂಕರ್‌ಗಳಲ್ಲಿ ಇರುವಂತೆ ಸೂಚಿಸಿದೆ. ಇರಾನ್‌ನಿಂದ ಮಿಲಿಟರಿ ಬೆದರಿಕೆಯ ನಡುವೆಯೂ ದೇಶದ ವಾಯುಪಡೆ ಮತ್ತು ಸೇನೆಯು ಹೆಚ್ಚಿನ ಎಚ್ಚರಿಕೆಯನ್ನು ಮುಂದುವರಿಸಿದೆ ಎಂದು ಇಸ್ರೇಲ್‌ನ ಉನ್ನತ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಈ ಹೇಳಿಕೆಯನ್ನು ಧೃಡಪಡಿಸಿದ್ದು, ಇರಾನ್ ಕದನ ವಿರಾಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಇರಾನಿನ ಅರೆಸೈನಿಕ ಮತ್ತು ಸರ್ಕಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿಯನ್ನು ಪುನರಾರಂಭಿಸುವಂತೆ ಇಸ್ರೇಲ್ ಮಿಲಿಟರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. 

   ಕದನ ವಿರಾಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಟ್ರಂಪ್‌ “ಕದನ ವಿರಾಮ ಈಗ ಜಾರಿಗೆ ಬಂದಿದೆ. ದಯವಿಟ್ಟು ಅದನ್ನು ಉಲ್ಲಂಘಿಸಬೇಡಿ ಎಂದು ಹೇಳಿದ್ದರು. ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ, ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ ಅದು ಆಗಲಿಲ್ಲ, ಮತ್ತು ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ಆಶೀರ್ವದಿಸಲಿ, ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ! ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಎಂದು ಅವರು ಬರೆದು ಕೊಂಡಿದ್ದರು.

Recent Articles

spot_img

Related Stories

Share via
Copy link