ಕದನ ವಿರಾಮ ಘೋಷಣೆ ಎಫೆಕ್ಟ್:‌ ಸೆನ್ಸೆಕ್ಸ್‌ 1,100 ಅಂಕ ಹೈ ಜಂಪ್‌

ಮುಂಬಯಿ:

   ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌ ಜತೆಗೆ ಇರಾನ್‌ ವಿರುದ್ಧದ ಸಮರಕ್ಕೆ ಸಂಬಂಧಿಸಿ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಅಭೂತಪೂರ್ವವಾಗಿ ಸ್ವಾಗತಿಸಿದೆ. ಸೆನ್ಸೆಕ್ಸ್‌ 1,100 ಅಂಕ ಏರಿಕೆಯಾದರೆ, ನಿಫ್ಟಿ 312 ಅಂಕ ಜಿಗಿದು 25,284 ಕ್ಕೆ ಏರಿಕೊಂಡಿತು. ಷೇರು ಹೂಡಿಕೆದಾರರಿಗೆ 5 ಲಕ್ಷ ಕೋಟಿ ರುಪಾಯಿ ಲಾಭವಾಯಿತು. ಜತೆಗೆ ಕಚ್ಚಾ ತೈಲ ದರದಲ್ಲೀ 5% ಇಳಿಕೆ ದಾಖಲಾಯಿತು.

   ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಕಚ್ಚಾ ತೈಲ ದರ ಸ್ಫೋಟವಾಗುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಬ್ರೆಂಟ್‌ ಕಚ್ಚಾ ತೈಲ ದರದಲ್ಲಿ 5% ಇಳಿಕೆಯಾಗಿದ್ದು, 67 ಡಾಲರಿಗೆ ತಗ್ಗಿತು. ತೈಲ ದರ ಇಳಿಕೆ ಕೂಡ ಷೇರು ಸೂಚ್ಯಂಕಗಳ ಜಿಗಿತಕ್ಕೆ ಕಾರಣವಾಯಿತು. ಒಪೆಕ್‌ನಲ್ಲಿ ಇರಾನ್‌ ಮೂರನೇ ಅತಿ ದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಒಂದು ವೇಳೆ ಕದನ ವಿರಾಮ ಏರ್ಪಡದಿದ್ದರೆ ಮತ್ತು ಸಂಘರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಇಸ್ರೇಲ್ ಮತ್ತು ಇರಾನ್‌ ನಡುವೆ ಕದನ ವಿರಾಮ ಆಗಿದೆ. 12 ದಿನಗಳ ಯುದ್ಧ ನಿಂತಿದೆ ಎಂದು ಘೋಷಿಸಿದ್ದಾರೆ.

   ಏಷ್ಯಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಇವತ್ತು ಸೂಚ್ಯಂಕಗಳು ಜಿಗಿದಿವೆ. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಎಲ್ಲ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 4.43 ಲಕ್ಷ ಕೋಟಿ ರುಪಾಯಿ ಏರಿಕೆಯಾಗಿದ್ದು, 452 ಲಕ್ಷ ಕೋಟಿ ರುಪಾಯಿಗೆ ಜಿಗಿಯಿತು. ನಿಫ್ಟಿ ಬ್ಯಾಂಕ್‌, ಹಣಕಾಸು ಸೇವೆ, ಆಟೊಮೊಬೈಲ್‌, ಐಟಿ, ಲೋಹ, ಪಿಎಸ್‌ಯು ಬ್ಯಾಂಕ್‌, ಕನ್‌ ಸ್ಯೂಮರ್‌ ಡ್ಯೂರಬಲ್ಸ್‌, ತೈಲ ಮತ್ತು ಅನಿಲ ಷೇರು ದರದಲ್ಲಿ 1-2% ಏರಿಕೆ ದಾಖಲಾಯಿತು. ನಿಫ್ಟಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಜಿಗಿಯಿತು.

  ಸೆನ್ಸೆಕ್ಸ್‌ ನಿಫ್ಟಿ ಏರಿಕೆಗೆ ಮೂರು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡುವುದಿದ್ದರೆ, ಇಸ್ರೇಲ್- ಇರಾನ್‌ ಕದನ ವಿರಾಮ, ಕಚ್ಚಾ ತೈಲ ದರ ಇಳಿಕೆ, ಜಾಗತಿಕ ಷೇರು ಮಾರಕಟ್ಟೆ ಮಂದಗತಿ.ಡಾಲರ್‌ ಇಂಡೆಕ್ಸ್‌ ಕೂಡ ಇಳಿಕೆಯಾಗಿದೆ. ಇದು ಕೂಡ ಷೇರು ಮಾರುಕಟ್ಟೆ ಚೇತರಿಕೆಗೆ ಕಾರಣವಾಯಿತು.ಬಿಪಿಸಿಎಲ್‌, ಎಚ್‌ ಪಿಸಿಎಲ್‌ ಮತ್ತು ಇತರ ತೈಲ ವಲಯದ ಷೇರು ದರ 5% ತನಕ ಏರಿಕೆಯಾಯಿತು.

  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕದನ ವಿರಾಮ ಘೋಷಣೆ ಮಾಡಿರುವುದು ಷೇರು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಬೇಗ ಉಪಶಮನವಾದಷ್ಟೂ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಏರಿಕೆ ದಾಖಲಿಸಲಿವೆ. ಅದು ಈಗ ನಡೆಯುತ್ತಿದೆ. ನಿಫ್ಟಿ 24,500-25,000 ನಡುವೆ ನಿಂತು ಹೋಗಿತ್ತು. ಈಗ ಮೇಲ್ಮುಖವಾಗಿದೆ ಎಂದು ಜಿಯೊಜಿತ್‌ ಇನ್ವೆಸ್ಟ್‌ ಮೆಂಟ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ವಿಕೆ ವಿಜಯ್‌ ಕುಮಾರ್‌ ಹೇಳಿದ್ದಾರೆ.

Recent Articles

spot_img

Related Stories

Share via
Copy link