ಕೊರಟಗೆರೆ
ಸಿಎನ್ ದುರ್ಗಾ ಹೋಬಳಿ, ಬುಕ್ಕಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ “ಕನ್ನಡ ಭಾಷಾ ವಿದ್ಯಾರ್ಥಿ ಕೈಪಿಡಿ” ವಿತರಣಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರುಗಿತು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಆರ್ ಶಿವಸ್ವಾಮಿ ರವರು ಮಾತನಾಡಿ ಇದೊಂದು ಶ್ಲಾಘನೀಯವಾದ ಕಾರ್ಯಕ್ರಮ ನಮ್ಮ ಶಾಲೆಯ ಶಿಕ್ಷಕರೇ ಆಗಿರುವ ಶ್ರೀ ಲಕ್ಷ್ಮಿ ಪುತ್ರ ಅವರು ತಮ್ಮ ಸ್ವಂತ ಹಣದಿಂದ ತಮಗೆಲ್ಲರಿಗೂ ಈ ಕೈಪಿಡಿಗಳನ್ನು ವಿತರಿಸುತ್ತಿದ್ದಾರೆ ಇದರ ಪ್ರಯೋಜನ ನೀವೆಲ್ಲರೂ ಪಡೆಯಯಬೇಕು ಜೊತೆಗೆ ಕನ್ನಡ ಭಾಷೆಯಲ್ಲಿ ಪ್ರಭುದ್ಧತೆ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು,
ಕನ್ನಡ ಭಾಷೆಯ ಎಲ್ಲಾ ಅಂಶಗಳು ಇದರಲ್ಲಿ ಅಡಕವಾಗಿದೆ ನೀವು ಪ್ರತಿಯೊಂದು ಅಂಶಗಳನ್ನು ಪದೇ ಪದೇ ಓದುವ ಮೂಲಕ ಮನನ ಮಾಡಿಕೊಳ್ಳಬೇಕು. 125 ಅಂಕಗಳಿಗೆ 125 ಅಂಕಗಳನ್ನು ಪಡೆಯುವ ಮೂಲಕ “ವಿದ್ಯಾರ್ಥಿ ಕೈಪಿಡಿಪುಸ್ತಕ ವಿತರಣೆ” ಸಾರ್ಥಕತೆಯಾಗುವಂತೆ ಮಾಡಬೇಕು ನಮ್ಮ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ ಉತ್ತಮ ಫಲಿತಾಂಶವೂ ಬಂದಿದೆ. ಎಂಬುದಾಗಿ ತಿಳಿಸಿದರು.
ಕನ್ನಡ ಭಾಷಾ ಶಿಕ್ಷಕರಾದ ಲಕ್ಷ್ಮಿ ಪುತ್ರರವರು ಕೈಪಿಡಿ ವಿತರಿಸಿ ಮಾತನಾಡುತ್ತಾ ಈ ಕನ್ನಡ ಕೈಪಿಡಿಯನ್ನ ಯಾರು ಕೂಡ ಹರಿದುಹೋಗದಂತೆ ನೋಡಿಕೊಳ್ಳಬೇಕು ಏಕೆಂದರೆ ಇವುಗಳು ನಿಮ್ಮ ನಂತರದ 8, 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಈ ಪುಸ್ತಕಗಳು ಬಳಕೆಯಾಗಬೇಕಿದೆ ಆದ್ದರಿಂದ ಶೈಕ್ಷಣಿಕ ವರ್ಷ ಮುಗಿದ ಮೇಲೆ ನೀವು ಪಡೆದಿರುವ ಪುಸ್ತಕಗಳನ್ನು ಹಾಗೆಯೇ ಶಾಲೆಗೆ ಹಿಂತಿರುಗಿಸಿ ಕೊಡಬೇಕೆಂದು ಮನವಿ ಮಾಡಿದರು, ಜೊತೆಗೆ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಪಠ್ಯ ವಿಷಯಗಳಲ್ಲಿರುವ ಗದ್ಯ, ಪದ್ಯಗಳು ಸೇರಿದಂತೆ, ಎಲ್ಲಾ ರೀತಿಯ ವ್ಯಾಕರಣಾಂಶಗಳನ್ನು ಕೈಪಿಡಿ ಒಳಗೊಂಡಿದೆ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಮಮತಾರಾಜು, SDMC ಅಧ್ಯಕ್ಷರಾದ ದೇವರಾಜು, ಉಪಾಧ್ಯಕ್ಷರಾದ ಶ್ರೀ ಶಿವಕುಮಾರ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ಕೈಪಿಡಿಗಳನ್ನು ವಿತರಿಸಿದರು. ಸಹ ಶಿಕ್ಷಕರಾದ ಶ್ರೀ ಚಿಕ್ಕಣ್ಣ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
