ಕಲಬುರುಗಿ : ಮಳಖೇಡ ಕೋಟೆಯ ಗೋಡೆ ಮತ್ತೆ ಕುಸಿತ

ಕಲಬುರಗಿ: 

   ಕಲಬುರಗಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಸೇಡಂ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಳಖೇಡ ಕೋಟೆಯ ಗೋಡೆ ಮತ್ತೆ ಗುರುವಾರ ಕುಸಿದುಬಿದ್ದಿದೆ.ಸೇಡಂ ಪಟ್ಟಣ ಸೇರಿದಂತೆ ತಾಲ್ಲೂಕಿನ ‌ವಿವಿಧೆಡೆ ಮಂಗಳವಾರ ಮತ್ತು ಬುಧವಾರ ರಾತ್ರಿ ಜೋರು ಮಳೆಯಾಗಿದ್ದು, ಸತತ ಮಳೆಗೆ ಐತಿಹಾಸಿಕ ಮಳಖೇಡ ಕೋಟೆಯ ಗೋಡೆ ತೇವಗೊಂಡು ಕುಸಿದಿದೆ.

   ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ದಿಢೀರ್ ಕೋಟೆಯ ಗೋಡೆ ನೆಲಕ್ಕುರುಳಿದೆ. ಈ ಕುರಿತ ವಿಡಿಯೋ ಸಾಮಾಜಿಕಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಕಳೆದ ತಿಂಗಳ ಆಗಸ್ಟ್ 31ರಂದು ಸಹ ಸತತ ಮಳೆಗೆ ಕೋಟೆಯ ಮತ್ತೊಂದು ಗೋಡೆ ಉರುಳಿ ಬಿದ್ದಿತ್ತು. ಆಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಉಪವಿಭಾಗ ಅಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕಾ ಧನಶ್ರೀ ಭೇಟಿ ನೀಡಿದ್ದರು.‌ ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದರು.

   ಆದರೆ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ತಿಂಗಳಲ್ಲಿ ಎರಡನೇ ಬಾರಿ ಕೋಟೆಯ ಗೋಡೆ ಉರುಳಿ ಬಿದ್ದಿದೆ. ಸತತ ಮಳೆಯಿಂದಾಗಿ ಕೋಟೆಯ ಕೆಲ ಭಾಗಕ್ಕೆ ಹಾನಿಯಾಗಿದ್ದು, ಅವು ಕೂಡ ಕುಸಿಯುವ ಭೀತಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link