ಕಮಲ ಹಾಸನ್‌ಗೆ ಇನ್ನೊಂದು ಶಾಕ್‌ ನೀಡಿದ ಹೈಕೋರ್ಟ್

ಬೆಂಗಳೂರು:

    ತಮಿಳು ನಟ ಕಮಲಹಾಸನ್‌ಗೆ ಕರ್ನಾಟಕದ ಕೋರ್ಟ್‌  ಇನ್ನೊಂದು ಶಾಕ್‌ ನೀಡಿದೆ. ಕನ್ನಡದ  ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ನಟ ಕಮಲ್ ಹಾಸನ್‌ಗೆ ನಿರ್ದೇಶಿಸಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ನಿರ್ಬಂಧ ಆಜ್ಞೆ ಹೊರಡಿಸಿದೆ. ಕನ್ನಡ ತಮಿಳಿನಿಂದ  ಹುಟ್ಟಿದ್ದು ಎಂದು ಕಮಲ್ ಈ ಹಿಂದೆ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಗುರಿಯಾಗಿದ್ದರು. ಅವರ ಥಗ್‌ ಲೈಫ್‌ ಸಿನಿಮಾ ಇದೇ ಕಾರಣದಿಂದ ಕ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಕರ್ನಾಟಕಕ್ಕೆ ಬಿಡುಗಡೆಯಾಗದೆ ಹೋಗಿತ್ತು.

   ಇದೀಗ, ನಟ ಕಮಲ್‌ ಹಾಸನ್ ಅವರಿಗೆ ನಿರ್ಬಂಧ ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ದಾವೆಯ ವಿಚಾರಣೆ ನಡೆಸಿದ ನಗರದ 31ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ಆದೇಶ ಹೊರಡಿಸಿದೆ. ಕನ್ನಡ ಭಾಷೆಯ ಮೇಲೆ ಭಾಷಾಶಾಸ್ತ್ರಜ್ಞರ ಶ್ರೇಷ್ಠತೆ ಪ್ರತಿಪಾದಿಸುವ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಪೋಸ್ಟ್ ಮಾಡುವುದು, ನೀಡುವುದು, ಬರೆಯುವುದು, ಪ್ರಕಟಿಸುವುದು ಅಥವಾ ವಿತರಿಸುವುದನ್ನು ನಿರ್ಬಂಧಿಸಲಾಗಿದೆ.

ಕಮಲ್ ಹಾಸನ್ ಅಥವಾ ಅವರ ಮೂಲಕ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗಳಿಗೆ ಇದು ಅನ್ವಯವಾಗುತ್ತದೆ ಎಂದಿದೆ. ಅಲ್ಲದೆ, ದಾವೆ ಸಂಬಂಧ ಕಮಲ್ ಹಾಸನ್‌ಗೆ ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿದೆ.

Recent Articles

spot_img

Related Stories

Share via
Copy link