ತಿರುಪತಿ
ಮುಂಬರುವ ವಿಧಾನ ಸಭಾ ಚುನವಾಣೆಯಲ್ಲಿ ಟಿಡಿಪಿ ಪಕ್ಷ ಸೋಲು ಅನುಭವಿಸಲಿದ್ದು, ವೈಎಸ್ಆರ್ ಸಿಪಿ ಪಕ್ಷದ ಜಗನ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ನಟ ಮೊಹನ್ ಬಾಬು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ತಿರುಪತಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದ್ದು, ಮತದಾರ ಟಿಡಿಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಜಗನ್ ಅವರು ಮುಖ್ಯಮಂತ್ರಿ ಆದಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಮತದಾರ ಆಮೀಷಕ್ಕೆ ಬಲಿಯಾಗಬಾರದು ಎಂದು ಮೊಹನ್ ಬಾಬು ಕರೆ ನೀಡಿದ್ದಾರೆ.
ಟಿಡಿಪಿ ಪಕ್ಷ ಚಂದ್ರಬಾಬು ಅವರ ಪಕ್ಷವಲ್ಲ. ಎನ್ ಟಿಆರ್ ನಿರ್ಮಿಸಿದ ಪಕ್ಷವನ್ನು ಇವರು ಹತೋಟಿಗೆ ತೆಗೆದುಕೊಂಡಿದ್ದಾರೆ. ತಿರುಪತಿ ಕ್ಷೇತ್ರದಲ್ಲಿ ಕರುಣಾಕರ್ ರೆಡ್ಡಿ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ