ಬೆಂಗಳೂರು.:
ಮಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿರುವ ಕಾಫಿ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕಾನೂನು ರೂಪಿಸಬೇಕು ಎಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.

ನಗರದ ಮಿಷನ್ ರಸ್ತೆಯ ಎಸ್ ಸಿಎಂ ಹೌಸ್ ಸಭಾಂಗಣದಲ್ಲಿ ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಬೆಳೆಗಾರರ ಒಕ್ಕೂಟ ಸಹಯೋಗದಲ್ಲಿ ಸೋಮವಾರ ನಡೆದ ಅಖಿಲ ಭಾರತ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಕಾಫಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕಾನೂನು ರೂಪಿಸಿ ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬೆಳೆಗಾರರು ಒತ್ತಾಯ ಮಾಡಿದರು.
ಕಾಫಿ ಬೆಳೆಗಾರರು ಎಂದರೆ ಶ್ರೀಮಂತರು ಎನ್ನುವ ಭಾವನೆ ಇದೆ.ಆದರೆ, ಈ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ, ಬಹುರಾಷ್ಟ್ರೀಯ ಸಂಸ್ಥೆಗಳ ಸುಲಿಗೆ ತಡೆಯಬೇಕಾಗಿದೆ.ಕಾಫಿ ಅನ್ನು ಬೆಳೆಗಾರರಿಂದ ಕಡಿಮೆ ಬೆಳೆಗೆ ಪಡೆದು, ಅದಕ್ಕೆ ಬ್ರ್ಯಾಂಡ್ ಲೇಬಲ್ ಹಾಕಿ.ಕೋಟ್ಯಾಂತರ ರೂಪಾಯಿ ಲಾಭ ಬಹುರಾಷ್ಟ್ರೀಯ ಕಂಪನಿಗಳಿಗೆ ದೊರೆಯುತ್ತಿದೆ.ಆದರೆ, ಶ್ರಮಪಟ್ಟ ಬೆಳೆಗಾರ, ಸಾಲ, ನಷ್ಟ ದಲ್ಲಿ ಸಿಲುಕಿದ್ದಾನೆ.ಹೀಗಾಗಿ, ಬೆಂಬಲ ಬೆಲೆ ನಿಗದಿ ಸಂಬಂಧ ಕಾನೂನು ಅಗತ್ಯ ಇದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ಪ್ರತಿಪಾದಿಸಿದರು.
ಖಾಸಗೀಕರಣದಿಂದ ಹೊಡೆತ
ಬಹುರಾಷ್ಟ್ರೀಯ ಕಂಪನಿಗಳ ಖಾಸಗೀಕರಣ ನೀತಿ ಒಪ್ಪಿಕೊಂಡಿರುವ ಪರಿಣಾಮ, ದೇಶದ ಕಾಫಿ ಉದ್ದಿಮೆ, ಕೃಷಿಯು ಗಂಭೀರ ಹಾನಿಗೊಳಗಾಗಿದೆ. ಈ ಉದ್ದಿಮೆಯಲ್ಲಿ ಬೆಳೆಯುತ್ತೀರುವ ಗುತ್ತೇದಾರಿಕೆ, ಆಮದು ದಾಸ್ತಾನು ಮುಖ್ಯವಾಗಿ, ಬೆಳೆಗಾರರಿಗೆ ಬಿಕ್ಕಟ್ಟಿಗೆ ತಳ್ಳಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಪಂಚದ ಕಾಫಿ ಉದ್ದಿಮೆಯಲ್ಲಿ ಭಾರತವೂ ಆರನೇ ಸ್ಥಾನ ಪಡೆದುಕೊಂಡಿದೆ.ಇನ್ನೂ, ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಕೊಡುಗೆ ಸಣ್ಣ ಬೆಳೆಗಾರರಿದ್ದಾರೆ. ಅದೇ ರೀತಿ, ಅತಿ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕವೂ, ಅತೀವೃಷ್ಟಿ, ಅನಾವೃಷ್ಟಿ, ಆನೆ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಿವರಿಸಿದರು.
ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ಡಾ.ಎಂ.ಎಸ್.ಸ್ವಾಮಿನಾಥನ್ ಕೃಷಿ ಆಯೋಗದ ಶಿಫಾರಸ್ಸಿನಂತೆ ಕಾಫಿ ಬೆಳೆಯ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇಕಡ ಅರ್ಧದಷ್ಟು ಲಾಭಾಂಶ ಸೇರಿಸಿದ ಕನಿಷ್ಟ ಬೆಂಬಲ ಬೆಲೆ ಖಾತರಿಗಾಗಿ ದೊರೆಯುವಂತೆ ಬೆಂಬಲ ಬೆಲೆ ಕಾನೂನು ಮಾಡಬೇಕು ಎಂದು ಒತ್ತಾಯಿಸಿದರು.
ಸಮಾವೇಶದಲ್ಲಿ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಕೃಷ್ಣ ಪ್ರಸಾದ್, ವಿಜು, ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು, ಕರ್ನಾಟಕ ಬೆಳೆಗಾರರ ಒಕ್ಕೂಟ(ಕೆಜಿಎಫ್) ಅಧ್ಯಕ್ಷ ಬಿ.ಎನ್.ಜೈರಾಂ, ಪ್ರಧಾನ ಕಾರ್ಯದರ್ಶಿ ತೀರ್ಥಮಲ್ಲೇಶ್, ಸೇತುರಾಂ ಲಿಗಂ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








