ಕೇಂದ್ರ ಬಜೆಟ್ 2020 :ಕೇಂದ್ರದಿಂದ ತೆರಿಗೆದಾರರಿಗೆ ಬಂಪರ್ ಕೊಡುಗೆ !!!

ನವದೆಹಲಿ :

      ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್​ ಮಂಡನೆ ಮಾಡಿದ್ದು, 5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ ಎನ್ನುವ ಮೂಲಕ ಸಿಹಿ ಸುದ್ದಿ ನೀಡಿದೆ.

      ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸುತ್ತಿರುವ ಸಂಪೂರ್ಣ ಬಜೆಟ್​ ಇದಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಯಲ್ಲಿ ಬಜೆಟ್​ ಮಂಡನೆ ಮಾಡುತ್ತಿದ್ದಾರೆ.

      ಇದೇ ವೇಳೆ ಕೇಂದ್ರ ಸರಕಾರದಿಂದ ತೆರಿಗೆದಾರರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ವೈಯಕ್ತಿಕ ಅದಾಯ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದ್ದು, ಹೊಸದಾಗಿ 5-7/5 ಲಕ್ಷ ಅದಾಯ ಹೊಂದಿರುವರು ಶೇ.10 ತೆರಿಗೆ ಕಟ್ಟಬೇಕು. 7.5-10 ಲಕ್ಷ ಅದಾಯಕ್ಕೆ ಶೇ15 ತೆರಿಗೆ, 10-12.5 ಲಕ್ಷ ಅದಾಯ ಹೊಂದಿರುವವರಿಗೆ ಶೇ20 ತೆರಿಗೆ . 12.5-15 ಲಕ್ಷ ಅದಾಯ ಹೊಂದಿರುವವರಿಗೆ ಶೇ 25 ರಷ್ಟು ತೆರಿಗೆ. 15 ಲಕ್ಷ ಮೇ‌ಲ್ಪಟ ಅದಾಯಕ್ಕೆ ಶೇ 30 ತೆರಿಗೆ ಕಟ್ಟಬೇಕು.

     2020 ರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದು, ಇದೇ ವೇಳೆ ವಿತ್ತ ಸಚಿವೆ ಸೀತಾರಾಮನ್ ಎಲ್‌ಐಸಿಯಲ್ಲಿ ತನ್ನ ಪಾಲಿನ ಒಂದು ಭಾಗವನ್ನು ಮಾರಾಟ ಮಾಡಲು ಪ್ರಸ್ತಾಪಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link