ನವದೆಹಲಿ :
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 14,516 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಈ ಕುರಿತಂತೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 14,516 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
India reports the highest single-day spike of 14516 new #COVID19 cases and 375 deaths in last 24 hours. Total number of positive cases now stands 395048 at including 168269 active cases, 213831 cured/discharged/migrated & 12948 deaths: Ministry of Health & Family Welfare pic.twitter.com/41TX8aorak
— ANI (@ANI) June 20, 2020
ಇನ್ನು ಒಂದೇ ದಿನದಲ್ಲಿ 375 ಮಂದಿ ಡೆಡ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ಒಟ್ಟು 3,95,048 ಸೋಂಕಿತರಿದ್ದಾರೆ, 2,13,831 ಮಂದಿ ಗುಣಮುಖರಾಗಿದ್ದಾರೆ. 168269 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಗುಣಮುಖರಾದವರ ಪ್ರಮಾಣ ಶೇ.54.12ರಷ್ಟು ಏರಿಕೆಯಾಗಿದೆ.
ದಿನದಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ 14 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ