ಮುಂಬೈ :
ಭಾರತೀಯ ನೌಕಾಪಡೆಯ 20ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಐಎನ್‌ಎಸ್ ಆಂಗ್ರೆನಲ್ಲಿರುವ ಅನೇಕರು ಕರೋನವೈರಸ್ ಪರೀಕ್ಷಿಸಿದ್ದು, ಸದ್ಯ ಈ ಪೈಕಿ 20 ಮಂದಿಗೆ ಸೊಂಕು ಉಂಟಾಗಿರುವುದು ಕಂಡು ಬಂದಿದ್ದು, ಮುಂಬೈ ನಗರದ ನೌಕಾ ಆಸ್ಪತ್ರೆಯಲ್ಲಿ ಈ ನಾವಿಕರನ್ನು ಕ್ವಾರಂಟೈನ್ ಮಾಡಲಾಗಿದೆ.
20 Navy personnel have tested positive for #COVID19 at a naval base in Mumbai. The first case was reported on April 7 at the INS Angre base there. All other persons who came in contact with these affected personnel have also been tested: Navy officials
— ANI (@ANI) April 18, 2020
ನೌಕಾಪಡೆಯಲ್ಲಿ ವರದಿಯಾಗುತ್ತಿರುವ ಮೊದಲ ಪ್ರಕರಣಗಳು ಇದಾಗಿದ್ದು, ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಒಟ್ಟು 3,205 ಪ್ರಕರಣಗಳು ವರದಿಯಾಗಿವೆ. ದೇಶದಾದ್ಯಂತ 13,835 ಪ್ರಕರಣಗಳ ಪೈಕಿ 452 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.
ಪಾಸಿಟಿವ್ ವರದಿ ಬಂದ ನಾವಿಕರು ಐಎನ್ ಎಸ್ ಆಂಗ್ರೆ ಎಂದು ಕರೆಯಲ್ಪಡುವ ವಸತಿಗಳಲ್ಲಿ ತಂಗಿದ್ದರು. ಸರಕು, ಸಾಗಣೆ ಮತ್ತು ಆಡಳಿತ ವ್ಯವಹಾರಗಳಲ್ಲಿನ ನೌಕ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನೌಕಾಪಡೆ ಕಮಾಂಡ್ ಗೆ ಐಎನ್ ಎಸ್ ಆಂಗ್ರೆ ಸಹಕಾರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
