ಒಂದು ವಾರದಿಂದ ಶಾಲೆಯಲ್ಲಿ ಕೂಡಿಹಾಕಿದ್ದ 17 ಗೋವುಗಳ ಸಾವು!!

ಭೋಪಾಲ್:

      ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಸರ್ಕಾರಿ ಶಾಲೆಯ ಹೊಲವೊಂದರಲ್ಲಿ ಹೂಳಲಾಗುತ್ತಿದ್ದ 17 ಹಸುಗಳ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

       ಹೊಲದಲ್ಲಿನ ಅಕ್ಕ-ಪಕ್ಕದ ಬೆಳೆಗಳನ್ನು ಗೋವುಗಳು ನಾಶ ಮಾಡುತ್ತವೆ ಎಂಬ ಕಾರಣದಿಂದ ರಜೆ ದಿನಗಳಿದ್ದ ಸಂದರ್ಭದಲ್ಲಿ ಶಾಲೆಯ ಕೊಠಡಿಯಲ್ಲಿ ಗೋವುಗಳನ್ನು ಕೂಡಿ ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಈ ವೇಳೆ ಒಂದು ವಾರ ಹಸಿವಿನಿಂದ ಬಳಲಿದ ಗೋವುಗಳು ಅಲ್ಲೇ ಸತ್ತುಹೋಗಿವೆ. ಶಾಲೆಯನ್ನು ಪುನಃ ತೆರೆದಾಗ ದುರ್ವಾಸನೆ ಬೀರಿದ್ದು,  ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

      ಇಂಥ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್‌ ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಭಜರಂಗದಳದ ಸದಸ್ಯರು ಬೀದಿಗಿಳಿದು ಘಟನೆಯ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

      ಈಗಾಗಲೇ ಸತ್ತ ಹಸುಗಳನ್ನು ಹೂಳಲು ಶಾಲಾ ಮೈದಾನವನ್ನು ಅಗೆಯುವಲ್ಲಿ ತೊಡಗಿರುವ ಅಗೆಯುವ ಯಂತ್ರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

      ಆದರೆ ಶಾಲೆಯೊಳಗಿನ ಹಸುಗಳನ್ನು ಯಾರು ಲಾಕ್ ಮಾಡಿದ್ದಾರೆ ಮತ್ತು ಶಾಲೆಗೆ ಇದರ ಬಗ್ಗೆ ತಿಳಿದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap