ಗಡಿಯಲ್ಲಿ ಮತ್ತೆ ಪಾಕ್ ಅಟ್ಟಹಾಸ : 9 ತಿಂಗಳ ಮಗು ಸೇರಿ 3 ಬಲಿ!!

ಜಮ್ಮು: 

       ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನ ಪುಂಡಾಟ ಮತ್ತೆ ಮುಂದುವರಿಸಿದೆ.

     ಈ ದಾಳಿಯಲ್ಲಿ ಪೂಂಚ್​ನ ಸಲ್ಟೋರಿ ಎಂಬಲ್ಲಿ 9 ತಿಂಗಳ ಹೆಣ್ಣು ಮಗು, 5 ವರ್ಷದ ಬಾಲಕ ಹಾಗೂ ಒಬ್ಬ ಮಹಿಳೆ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

      ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ನಾಗರಿಕ ವಸತಿ ಪ್ರದೇಶದ ಮೇಲೆ ತೀವ್ರತರದ ದಾಳಿ ನಡೆಸಿದ ಪಾಕ್​ ಯೋಧರು, ಮಾರ್ಟಾರ್​ ಬಾಂಬ್​ಗಳನ್ನು ಸಿಡಿಸುತ್ತಿದ್ದಾರೆ. ಹೋವಿಟ್ಜರ್​ 105 ಎಂಎಂ ಸೇರಿ ಭಾರಿ ಗನ್​ಗಳನ್ನು ಬಳಸಿ ಗುಂಡಿನ ಸುರಿಮಳೆಗೈಯ್ಯುತ್ತಿದ್ದಾರೆ. 

      ಫೂಂಚ್ ಜಿಲ್ಲೆಯ ರುಬಾನಾ ಕೋಸಾರ್ (24ವರ್ಷ) ಹಾಗೂ ಆಕೆಯ 5ವರ್ಷದ ಪುತ್ರ ಫಾಝಾನ್ ಹಾಗೂ 9 ತಿಂಗಳ ಮಗು ಶಬನಮ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ರುಬಾನಾ ಕೌಸರ್​ ಪತಿ ಮೊಹಮ್ಮದ್​ ಯೂನಿಸ್​ ಗಂಭೀರವಾಗಿ ಗಾಯಗೊಂಡಿದ್ದಾರೆ.

      ಮನ್​ಕೋಟ್​ನಲ್ಲಿ ನಸೀಂ ಅಖ್ತರ್​ ಎಂಬ ಮಹಿಳೆಗೂ ಪಾಕ್​ ಯೋಧರು ಸಿಡಿಸಿದ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದಲ್ಲದೆ ಕೃಷ್ಣಘಾಟಿ ಮತ್ತು ಬಾಳಾಕೋಟ್​ ಪ್ರದೇಶದಲ್ಲಿ ಕೂಡ ಪಾಕ್​ ಯೋಧರು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದ್ದಾರೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap