ಅಜಂಗಢ್
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅಜಂಗಢ್ ಲೋಕಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದ್ದು, 24.80 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಅಖಿಲೇಶ್ ಅವರು ಉಳಿತಾಯ ಖಾತೆ ಹಾಗೂ ಹಣ ಸೇರಿದಂತೆ ಒಟ್ಟು 7.90 ಕೋಟಿ ರೂ. ಹಾಗೂ ಸ್ಥಿರ ಆಸ್ತಿ 16.90 ಕೋಟಿ ರೂ. ಹೊಂದಿದ್ದಾರೆ. ಅಲ್ಲದೆ ಬ್ಯಾಂಕ್ ಗಳಿಂದ 14,26,500 ರೂ. ಸಾಲ ಪಡೆದಿದ್ದಾಗಿ ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಇವರ ಪತ್ನಿ ಡಿಂಪಲ್ ಯಾದವ್ ಅವರ ಹೆಸರಿನಲ್ಲಿ 3.68 ಕೋಟಿ ಚರಾಸ್ತಿ ಹಾಗೂ 9.30 ಕೋಟಿ ರೂ. ಸ್ಥಿರಾಸ್ಥಿ ಹೊಂದಿದ್ದು, ಒಟ್ಟು 12.98 ಕೋಟಿ ರೂ. ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಖಿಲೇಶ್ ಅವರು 1994-95ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇ ಪಡೆದಿರುತ್ತಾರೆ ಎಂದು ತಿಳಿಸಿದ್ದಾರೆ