ರಜೌರಿ :
ಗಡಿ ನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿರುವ ಘಟನೆ ಜಮ್ಮುಕಾಶ್ಮೀರದ ನೌಶೆರಾ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ನಡೆದಿದೆ.
ನೌಶೆರಾ ಸೆಕ್ಟರ್ ಬಳಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಗಡಿ ನುಸುಳಲು ಯತ್ನ ನಡೆಸಿದ ಮೂವರು ಪಾಕ್ ಸೈನಿಕರನ್ನು ಭಾರತೀಯ ಸೇನಾ ಪಡೆಗಳು ಹತ್ಯೆ ಮಾಡಿವೆ ಎಂದು ವರದಿಯಾಗಿದೆ.
In an ongoing counter-infiltration operation since 28 May, alert troops of Indian Army eliminated an infiltration bid along Line of Control in Naushera Sector. 3 heavily-armed Pakistan trained terrorists have been killed. Search operation in the area is in progress: Indian Army pic.twitter.com/FITyzEc559
— ANI (@ANI) June 1, 2020
ಪಾಕಿಸ್ತಾನ ತರಬೇತಿ ನೀಡಿರುವ ಹಲವು ಉಗ್ರರು ಈಗಾಗಲೇ ಭಾರತದ ಗಡಿ ನುಸುಳಲು ಸಿದ್ಧವಾಗಿ ನಿಂತಿದ್ದು. ಮೇ.28 ರಿಂದ ಗಡಿ ನುಸುಳಲು ಸತತ ಯತ್ನ ನಡೆಸುತ್ತಲೇ ಇದ್ದಾರೆ.
ಕೆಲ ದಿನಗಳ ಹಿಂದೆ ಪುಲ್ವಾಮಾದಲ್ಲಿ ಭಾರೀ ಪ್ರಮಾಣದ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರೀ ಪ್ರಮಾಣದ ಸ್ಪೋಟಕ ತುಂಬಿದ್ದ ವಾಹನವೊಂದನ್ನು ಪತ್ತೆ ಹಚ್ಚುವ ಮೂಲಕ ಉಗ್ರರ ಸಂಚು ವಿಫಲಗೊಳಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ