ಸಲ್ಲು ಐಶ್‌ ಬ್ರೇಕಪ್‌ ಗೆ ಕಾರಣ ಗೊತ್ತಾ….?

ಮುಂಬೈ:

 ಬಾಲಿವುಡ್‌ ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ  ಐಶ್‌-ಸಲ್ಮಾನ್‌ ಜೋಡಿ ಕೆಲ ವರಷಗಳ ಹಿಂದಷ್ಟೆ ಆದ ಬ್ರೇಕಪ್ ನಂತರ ಸಲ್ಮಾನ್ ಖಾನ್ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದರು. ಐಶ್ವರ್ಯಾ ತಮ್ಮ ಜೊತೆಗಿಲ್ಲ ಎಂಬ ಸತ್ಯವನ್ನು ಸಲ್ಲು ಬಾಯ್ ಒಪ್ಪಿಕೊಳ್ಳಲು ಬಹಳ ಸಮಯ ಹಿಡಿಯಿತು ಎನ್ನಲಾಗಿದೆ. ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್‌ ಆದ ಬಳಿಕ ಸ್ವಲ್ಪ ಸಮಯದ ನಂತರ, ಐಶ್ವರ್ಯಾ ರೈ ಅವರ ಹೆಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು..

    ಈ ಹೊಸ ಪ್ರೇಮ ಪ್ರಕರಣದ ಬಗ್ಗೆ ತಿಳಿದ ನಂತರ ಸಲ್ಮಾನ್ ಖಾನ್ ಇನ್ನಷ್ಟು ಕೆರಳಿದ್ದರಂತೆ… ಮಾಧ್ಯಮ ವರದಿಗಳ ಪ್ರಕಾರ ಸಲ್ಮಾನ್ ಖಾನ್ ವಿವೇಕ್ ಒಬೆರಾಯ್ ಅವರ ಮನೆಗೆ ಭೇಟಿ ನೀಡಿ ಅವರಿಗೆ ನಿಂದನೆಯ ಮಾತುಗಳನ್ನಾಡಿ ಈ ವಿಷಯವನ್ನು ಸ್ವತಃ ವಿವೇಕ್ ಒಬೆರಾಯ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಈ ಪ್ರಕರಣದ ನಂತರ ಐಶ್ವರ್ಯಾ ರೈ ಕೂಡ ವಿವೇಕ್ ಒಬೆರಾಯ್ ಜೊತೆಗಿನ ಸಂಬಂಧಕ್ಕೆ ಬ್ರೇಕ್‌ ಹಾಕಿದ್ದರು..

    ಅದರಂತೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಸಂಬಂಧವು ಏಕೆ ಮುರಿದುಹೋಯಿತು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ. ಸಲ್ಮಾನ್ ಖಾನ್ ತನ್ನ ಲವ್ ಐಶ್ವರ್ಯಾ ರೈ ಜೊತೆ ಮದುವೆಯಾಗಲು ಬಯಸಿದ್ರಂತೆ.. ಆದರೆ ಆ ಸಮಯದಲ್ಲಿ ಐಶ್ವರ್ಯಾ ತನ್ನ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದರಂತೆ..

    ಐಶ್ವರ್ಯಾ ರೈ ಬಾಲಿವುಡ್‌ನ ಟಾಪ್ ನಟಿಯಾಗಲು ಶ್ರಮಿಸುತ್ತಿದ್ದರು, ಆದರೆ ಸಲ್ಮಾನ್ ಖಾನ್ ಅವರನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಲು ತಯಾರಿ ನಡೆಸುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ಐಶ್ವರ್ಯಾ ರೈ ಮದುವೆಯ ಬಗ್ಗೆ ಯಾವುದೇ ಆಸಕ್ತಿ ತೋರಿಸಲಿಲ್ಲ ಮತ್ತು ಸಲ್ಮಾನ್ ಖಾನ್ ಈ ಬಗ್ಗೆ ಬೇಸರಗೊಂಡಿದ್ದರು. ಇದಾದ ನಂತರವೇ ಇಬ್ಬರ ನಡುವೆ ಜಗಳ ಶುರುವಾಗಿದ್ದು.. ಐಶ್‌ ನಟಿಸುತ್ತಿದ್ದ ಸಿನಿಮಾ ಶೂಟಿಂಗ್‌ ಸೆಟ್‌ಗೆ ಹೋಗಿ ಸಲ್ಮಾನ್‌ ಖಾನ್‌ ಕುಡಿದು ಗಲಾಟೆ ಮಾಡಿದ್ದರಂತೆ..

   ಈ ಮೊದಲು ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ವಿವಾದವಿತ್ತು, ಆದರೆ ಶೂಟಿಂಗ್ ಸೆಟ್‌ನಲ್ಲಿ ಗಲಾಟೆಯಾದ ನಂತರ, ಐಶ್ವರ್ಯಾ ರೈ ನಟನ ಮೇಲೆ ತೀವ್ರ ಕೋಪಗೊಂಡು ಅವರೊಂದಿಗೆ ಬ್ರೇಕ್‌ ಅಪ್‌ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ..

 

Recent Articles

spot_img

Related Stories

Share via
Copy link
Powered by Social Snap