ಕೃಷ್ಣಜನ್ಮಾಷ್ಟಮಿ : ದೇವಾಲಯದ ಬಳಿ ಕಾಲ್ತುಳಿತಕ್ಕೆ 4 ಬಲಿ

ಕೋಲ್ಕತ್ತಾ :

      ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ವೇಳೆ ದೇವಾಲಯದ ಗೋಡೆ ಕುಸಿದ ಪರಿಣಾಮ  ಕಾಲ್ತುಳಿತದಂಥ ಸನ್ನಿವೇಶ ಸೃಷ್ಟಿಯಾಗಿ, ನಾಲ್ವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

      ಕಛುವಾ ಲೋಕ್ ನಾಥ್ ದೇವಾಲಯದ ಬಳಿ ಈ ಘಟನೆ ಸಂಭವಿಸಿದ್ದು, ಈ ವರ್ಷ ದೇವಾಲಯದ ಬಳಿ ಕೃಷ್ಣ ಜನ್ಮಾಷ್ಟಿಮಿಯಂದು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬೆಳಂಬೆಳಗ್ಗೆ ಭಾರೀ ಮಳೆ ಶುರು ಆಯಿತು. ಬಿದಿರಿನಿಂದ ಮಾಡಿದ ರಚನೆ ಅಡಿಯಲ್ಲಿ ನಿಲ್ಲಲು ಏಕಾಏಕಿ ತೆರಳಿದ್ದಾರೆ. ಆ ವೇಳೆ ಆ ಬಿದಿರಿನ ರಚನೆ ಮಳೆಗೆ ಕುಸಿದಿದೆ.

       ಈ ಸ್ಥಳ ಕಿರಿದಾಗಿದ್ದು, ಜನರ ಸಂಖ್ಯೆ ಕೂಡ ಹೆಚ್ಚಾಗಿತ್ತು. ದೇವಸ್ಥಾನದ ಬಳಿಯೇ ಇರುವ ಕೆರೆಯಲ್ಲಿ ಕೆಲವರು ಈ ವೇಳೆ ಬಿದ್ದಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿ ಕಾಲ್ತುಳಿತದಂಥ ಸನ್ನಿವೇಶ ಸೃಷ್ಟಿಯಾಗಿದೆ. ಜನರು ಜೀವ ಉಳಿಸಿಕೊಳ್ಳಲು ಓಡಿದ್ದಾರೆ. ಕಾಲ್ತುಳಿತದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಹಲವಾರು ಭಕ್ತರು ಗಾಯಗೊಂಡಿದ್ದಾರೆ. 

      ಗಾಯಾಳುಗಳನ್ನು ಜಿಲ್ಲೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಇದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

      ಮೃತರ ಕುಟುಂಬದವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap